ಕೂತುಂಡು ಕರೆದೋದರು-ಪಾರ್ಟನರಗಳಿಂದಲೇ ಅಪಹರಿಸಿ ಕೊಲೆ
ಕಲಬುರಗಿ: ಕೂಡಿಕೊಂಡು ಉದ್ಯೋಗ ಮಾಡುತ್ತಿದ್ದವರೇ ತಮ್ಮ ಆಪ್ತನನ್ನ ಅಪಹರಣ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟು, ಹಣ ಸಿಗದೇ ಇದ್ದಾಗ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಕೊಲೆಯಾದ ವ್ಯಕ್ತಿಯ ಶವ ಕಾಗಿಣಾ ನದಿಯ ಕುರಿಕೋಟಾ ಸೇತುವೆಯ ಬಳಿ ದೊರೆತಿದೆ.
ಕಲಬುರಗಿ ನಗರದ ಯಾದುಲ್ಲ ಕಾಲೋನಿಯ ನಿವಾಸಿ ಗೌಸೋದ್ದಿನ್ ಎಂಬ ವ್ಯಕ್ತಿಯೇ ಕೊಲೆಯಾಗಿದ್ದು, ಈತ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದ ಬ್ಯುಸಿನೆಸ್ ಮಾಡ್ತಿದ್ದ. ಅಕ್ಟೋಬರ್ 22 ರಂದು ಯಾದುಲ್ಲ ಕಾಲೋನಿಯಿಂದ ನಾಪತ್ತೆಯಾಗಿದ್ದ ಗೌಸೋದ್ದಿನ್, ನಿನ್ನೆ ಕಾಗಿಣಾ ನದಿಯ ಕುರಿಕೋಟಾ ಬ್ರೀಡ್ಜ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಫಯಾಜ್, ನಿಜಾಮ್ ಮತ್ತು ವಾಜಿದ್ ಎಂಬುವರ ಜೊತೆ ಪಾರ್ಟ್ನರ್‌ಶಿಪ್‌ನಲ್ಲಿ ಕಾರು ಮಾರಾಟ ಮಾಡ್ತಿದ್ದ ಗೌಸೋದ್ದಿನನ್ನ, ಹಣಕಾಸಿನ ವಿಚಾರಕ್ಕೆ ಅಪಹರಿಸಿ ಪಾರ್ಟನರಗಳೇ ಕೊಲೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೌಸೋದ್ಧಿನನ ಪಾರ್ಟನರುಗಳಾದ ಫಯಾಜ್, ನಿಜಾಮ್ ಮತ್ತು ವಾಜಿದ್ ಎಂಬುವವರನ್ನ ಬಂಧನ ಮಾಡಲಾಗಿದೆ. ಪ್ರಕರಣವನ್ನ ರೋಜಾ ಠಾಣೆ ಪೊಲೀಸರು ಭೇದಿಸಿದ್ದಾರೆ.