ಕಲ್ಲೂರ ಸರಕಾರಿ ಶಾಲೆಯಲ್ಲಿ ಕಾನೂನು ಉಲ್ಲಂಘನೆ: ಇಲ್ಲಿಯ ಮುಖ್ಯಾಧ್ಯಾಪಕರಿಗೂ ಜ್ಞಾನವಿಲ್ಲವೇ..?

ಧಾರವಾಡ: ಸರಕಾರಿ ಶಾಲೆಗಳಲ್ಲಿ ಎಸ್ ಡಿಎಂಸಿ ಮಾಡುವಾಗ ಸರಕಾರದ ಕಾನೂನುಗಳನ್ನ ಪಾಲನೆ ಮಾಡಬೇಕೆಂಬ ಜ್ಞಾನವೂ ಇಲ್ಲದ ಹಾಗೇ ಸರಕಾರಿ ಶಾಲೆಯ ಎಸ್ ಡಿಎಂಸಿ ನೇಮಕ ಮಾಡಿದ್ದು, ಶಾಲೆಯ ಮುಖ್ಯಾಧ್ಯಾಪಕರಿಗೂ ಇದರ ಜ್ಞಾನವಿಲ್ಲದೇ ಇರುವುದು ದೊಡ್ಡದೊಂದು ದುರಂತವೇ ಸರಿ.
ಧಾರವಾಡ ತಾಲೂಕಿನ ಕಲ್ಲೂರ ಗ್ರಾಮದ ಕುವೆಂಪು ದಶಮಾನೋತ್ಸವ ಮಾದರಿ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಎಸ್ ಡಿಎಂಸಿಯಲ್ಲಿ ಕಾನೂನು ಉಲ್ಲಂಘನೆ ಮಾಡಿಯೇ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ.
ಸರಕಾರದ ನಿಯಮದ ಪ್ರಕಾರ ವಿದ್ಯಾರ್ಥಿಗಳ ಪಾಲಕರಿಗೆ ಮಾತ್ರ ಅವಕಾಶವಿರುತ್ತದೆ. ಆದರೆ, ಕಲ್ಲೂರ ಸರಕಾರಿ ಶಾಲೆಯಲ್ಲಿ ತಮ್ಮ ಮಕ್ಕಳು ಶಾಲೆಯಲ್ಲಿ ಇಲ್ಲದೇ ಇದ್ದರೂ ಮಲ್ಲಿಕಾರ್ಜುನ ಕುರುಬಗಟ್ಟಿ ಎನ್ನುವವರು ಅಧ್ಯಕ್ಷರನ್ನಾಗಿ ಮಾಡಿ, ಸರಕಾರದ ಸಂಬಳ ಪಡೆಯುವವರು ಸರಕಾರದ ನಿಮಯಗಳನ್ನ ಗಾಳಿಗೆ ತೂರಿದ್ದಾರೆ.
ಈ ಶಾಲೆಯ ಮುಖ್ಯಾಧ್ಯಾಪಕಿ ಎಂ.ಎಸ್.ಪಾಟೀಲ ಅವರಿಗೂ ಇಲ್ಲಿಯವರೆಗೆ ಶಾಲೆಯ ಎಸ್ ಡಿಎಂಸಿ ನೇಮಕದ ನಿಯಮಗಳು ಗೊತ್ತೆಯಿಲ್ಲ. ಅವರಿನ್ನೂ ಬಿಇಓಗಳನ್ನ ಕೇಳುವುದರಲ್ಲೇ ಇದ್ದಾರೆ. ನಾಡಿದ್ದು ಗಣರಾಜ್ಯೋತ್ಸವಿದೆ ಎಂಬುದು ಕೂಡಾ ಮರೆತು, ಕಾನೂನು ಉಲ್ಲಂಘಿಸಿ ಅಧ್ಯಕ್ಷರಾದವರಿಂದಲೇ ಧ್ವಜಾರೋಹಣ ಮಾಡಲು ಮುಂದಾಗಿದ್ದಾರೆ.
ಸರಕಾರಿ ಶಾಲೆಯಲ್ಲೇ ಸರಕಾರದ ನಿಯಮಗಳನ್ನ ಗಾಳಿಗೆ ತೂರಿರುವ ಮುಖ್ಯಾಧ್ಯಾಪಕಿ ಪಾಟೀಲರ ವಿರುದ್ಧ ಹಲವು ದೂರುಗಳು ಕೇಳಿ ಬಂದಿದ್ದು, ಪಾಲಕರಲ್ಲದವರನ್ನ ಎಸ್ ಡಿಎಂಸಿಗೆ ಅಧ್ಯಕ್ಷರನ್ನಾಗಿ ಮಾಡಿರುವ ಹಿಂದೆ ಬೇರೆಯದ್ದೇ ಕಾರಣವಿದೆ ಎಂದು ಹೇಳಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಈ ಶಾಲೆಯ ಮುಖ್ಯಾಧ್ಯಾಪಕಿ ಪಾಟೀಲರಿಗೆ ಸರಕಾರದ ನಿಯಮಗಳು ಏನು ಹೇಳುತ್ತವೆ ಎಂಬುದನ್ನ ತಿಳಿಸಿ, ಗ್ರಾಮದಲ್ಲಿನ ಗೊಂದಲವನ್ನ ಸರಿಪಡಿಸಬೇಕಿದೆ.