ಬರಗಾಲ “ಕಲಘಟಗಿ” ಹೊರತು ಪಡಿಸಿ ಘೋಷಣೆ ಮಾಡಿದ ಸರಕಾರ…

ಬೆಂಗಳೂರು: ರಾಜ್ಯದಲ್ಲಿ ಸರಿಯಾದ ಸಮಯದಲ್ಲಿ ಬೇಕಾದಷ್ಟು ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ 195 ತಾಲೂಕುಗಳನ್ನ ಬರಗಾಲ ಪೀಡಿತವೆಂದು ಘೋಷಣೆ ಮಾಡಿ, ಅಧಿಕೃತ ಆದೇಶವನ್ನ ಹೊರಡಿಸಿದೆ.
195 ತಾಲೂಕುಗಳ ಪೈಕಿ 161 ತಾಲೂಕುಗಳು ತೀವ್ರ ಬರಪೀಡಿತ ಮತ್ತು 34 ತಾಲೂಕುಗಳು ಸಾಧಾರಣ ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ ತಾಲೂಕನ್ನ ಬರಗಾಲ ವ್ಯಾಪ್ತಿಯಿಂದ ಕೈಬಿಡಲಾಗಿದೆ.
ರಾಜ್ಯ ಸರಕಾರ ಕೇಂದ್ರ ಸರಕಾರದ ನಿಯಮಗಳ ಅಡಿಯಲ್ಲಿ ಕಾಮಗಾರಿಗಳನ್ನ ಆರಂಭಿಸಲಿದ್ದು, ಬರಪೀಡಿತ ಪ್ರದೇಶಗಳಿಗೆ ಹೆಚ್ಚುವರಿ ಅನುದಾನ ನೀಡುವ ಸಾಧ್ಯತೆಯಿದೆ.