ಪ್ರಿಯತಮೆಗೆ ಪತಿಯನ್ನೇ ಮಾರಿದ ಆಧುನಿಕ ಸತಿ- ಕರ್ನಾಟಕದ ದುರಂತ ಘಟನೆ
ಮಂಡ್ಯ: ಒಂದು ತಿಂಗಳಿನ ಸಮಯ ನೀಡಿ, ಗಂಡನನ್ನ ಖರೀದಿಸುವಂತೆ ಪ್ರಿಯತಮೆಗೆ ಷರತ್ತು ಹಾಕಿರುವ ವಿಚಿತ್ರ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದ್ದು, ಈ ಘಟನೆಗೆ ಪಂಚಾಯತಿ ಸಾಕ್ಷಿಯಾಗಿದೆ.
ಘಟನೆ ವಿವರ: ರಮ್ಯ (ಹೆಸರು ಬದಲಾಯಿಸಲಾಗಿದೆ) ಎಂಬುವವಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತಿ ರಾಮು, ಪತ್ನಿಯ ಹತ್ತಿರ ಸಿಕ್ಕಿಬಿದ್ದಿದ್ದ. ಈ ಸಮಯದಲ್ಲಿ ಪತ್ನಿ-ಪ್ರಿಯತಮೆಯ ನಡುವೆ ಮಾತಿಗೆ ಮಾತು ಬೆಳೆದು ಬಡಿದಾಡಿಕೊಂಡಿದ್ದರು. ಹೀಗಾಗಿ ಇದೇ ವಿಷಯ ಪಂಚಾಯತಿ ಕಟ್ಟೆಯನ್ನ ಏರಿತ್ತು.
ಈ ಸಂಬಂಧ ಪಂಚಾಯತಿಯಲ್ಲಿ ವಾದ ವಿವಾದಗಳು ನಡೆದಾಗ. ಪ್ರಿಯತಮೆ, ನಿನ್ನ ಗಂಡ ಐದು ಲಕ್ಷ ರೂಪಾಯಿ ಕೊಡಬೇಕು. ಅದನ್ನ ಕೊಟ್ಟು ನಿನ್ನ ಗಂಡನನ್ನ ಕರೆದುಕೊಂಡು ಹೋಗು ಎಂದು ಹೇಳಿದಳು. ಇದಕ್ಕೆ ವಿರುದ್ಧವಾಗಿ ಮಾತನಾಡಿದ ಪತ್ನಿ, ನನಗೆ ಗಂಡನೂ ಬೇಡಆ, ಏನೂ ಬೇಡ. ನಿಮ್ಮಬ್ಬರನ್ನ ನ್ಯಾಯಾಲಯದಲ್ಲಿ ಅಲೆಯುವಂತೆ ಮಾಡುತ್ತೇನೆ. ನನಗೆ ಜೀವನಾಂಶಕ್ಕೆ ಐದು ಲಕ್ಷ ರೂಪಾಯಿ ಕೊಡಬೇಕೆಂದು ಹೇಳಿದಳು.
ತಕ್ಷಣವೇ ಪ್ರಿಯತಮೆ ರಮ್ಯಾ, ಐದು ಕೊಟ್ಟರೇ ನೀನು ನಿನ್ನ ಗಂಡನನ್ನ ಬಿಟ್ಟು ಕೊಡ್ತೀಯಾ ಎಂದು ಕೇಳಿದಾಗ ಪಂಚಾಯತಿ ಎದುರೇ ಒಪ್ಪಿಕೊಂಡಿದ್ದಾಳೆ ಪತ್ನಿ. ಅಷ್ಟೇ ಅಲ್ಲ, ಒಂದು ತಿಂಗಳ ಒಳಗಾಗಿ ಐದು ಲಕ್ಷ ಕೊಟ್ಟು ಗಂಡನನ್ನ ಖರೀದಿಸುವಂತೆ ಸೂಚನೆ ನೀಡಿದ್ದಾಳೆ.
ಗಂಡನ ಖರೀದಿಯ ದಿನ ತಾಳಿಯನ್ನ ಬಿಚ್ಚಿಟ್ಟು, ಒಪ್ಪಂದ ಪತ್ರಕ್ಕೆ ಸಹಿ ಹಾಕುವುದಾಗಿ ಪತ್ನಿ ಹೇಳಿದ್ದನ್ನ ಕೇಳಿ ಗ್ರಾಮಸ್ಥರು ಹೌಹಾರಿದ್ದಾರೆ. ಮಹಿಳೆಯರಿಬ್ಬರ ರಾಜೀ ಪಂಚಾಯತಿ ಮಾಡಲು ಹೋದವರು ಕೂಡಾ, ಬಾಯಿ ಮುಚ್ಚಿಕೊಂಡು ಮನೆ ಹಾದಿ ಹಿಡಿದಿದ್ದಾರಂತೆ.