ಅದು ಅಪಘಾತದಿಂದ ಆಗಿದ್ದಲ್ಲ, ಅಲ್ಲಿ ಆತ… ! ದೂರು ದಾಖಲಾಗಿದೆ ಯುವ ಪಡೆಯ ‘ಕಾರ್ ನಾಮಾ’

ಹುಬ್ಬಳ್ಳಿ: ಅಪಘಾತವಾಗಿ ಗಾಯಗೊಂಡು ಯುವತಿಯೋರ್ವಳು ಚಿಕಿತ್ಸೆ ಪಡೆಯುತ್ತಿದ್ದ ಪ್ರಕರಣವೊಂದು ಬೇರೆಯದೇ ಸ್ವರೂಪ ಪಡೆದಿದ್ದು, ಯುವತಿಯನ್ನ ಕರೆದುಕೊಂಡು ಹೋಗಿ ಆಕೆಯೊಂದಿಗೆ ಬಲವಂತವಾಗಿ ಹಾಗೇ ನಡೆದುಕೊಂಡ ಘಟನೆಗೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ ತಾಲೂಕಿನ ಮಾವನೂರ ಗ್ರಾಮದ ಯುವತಿಯೂ ಕಂಪ್ಯೂಟರ್ ಕ್ಲಾಸ್ ಗೆ ಬಂದು ತನ್ನ ಕಣ್ಣಿನ ನೋವಿಗೆ ಕಿಮ್ಸನಲ್ಲಿ ಚಿಕಿತ್ಸೆ ಪಡೆದು ಮರಳಿ, ತನ್ನೂರಿಗೆ ಹೋಗುವಾಗ ಅದೇ ಗ್ರಾಮದ ಯುವಕ ಮಲೀಕ್, ಯುವತಿಯನ್ನ ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಗುಪ್ತಾಂಗಕ್ಕೆ ಗಾಯ ಮಾಡಿದ್ದಾನೆಂದು ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿರ್ಜನ ಪ್ರದೇಶದಿಂದ ಮರಳಿ ಬರುವಾಗ ಅಪಘಾತವಾಗಿದ್ದರಿಂದ ಈ ಘಟನೆ ಹೊರಗೆ ಬಂದಿರಲಿಲ್ಲ. ನಂತರ ವೈಧ್ಯರು ಚಿಕಿತ್ಸೆ ನೀಡುವಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇದೇ ಕಾರಣಕ್ಕೆ ಮಲೀಕ ಎಂಬ ಯುವಕನ ಮೇಲೆ ದೂರನ್ನ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.
ಬೈಕಿನಲ್ಲಿ ಬೇರೆ ಕಡೆ ಕರೆದುಕೊಂಡು ಹೋಗುವಾಗ ಯುವತಿ ನಿರಾಕರಿಸಿದ್ದಳಂತೆ. ಅಷ್ಟೇ ಅಲ್ಲ, ಮಲೀಕ ಎಂಬ ಯುವಕನ ಜೊತೆ ಮತ್ತೊಬ್ಬ ಯುವಕನಿರುವುದು ಕೂಡಾ ದೂರಿನಲ್ಲಿ ಪ್ರಸ್ತಾಪವಾಗಿದೆ. ಈ ಬಗ್ಗೆಯೂ ಪೊಲೀಸರು ತನಿಖೆಯನ್ನ ಕೈಗೊಂಡಿದ್ದಾರೆ.