ಬಾತ್ ರೂಮಿನಲ್ಲಿ ಗೀಜರ್ ಸೋರಿಕೆ: ಸ್ನಾನ ಮಾಡುತ್ತಿದ್ದ ವೃದ್ದೆಗೆ ಬೆಂಕಿ, ಸಾವು

ಹುಬ್ಬಳ್ಳಿ: ಬಾತ್ ರೂಮಿನಲ್ಲಿ ಸ್ನಾನ ಮಾಡುವಾಗ ಗ್ಯಾಸ್ ಗೀಜರನ ಸಿಲಿಂಡರ್ ಸೋರಿಕೆಯಿಂದ ಬೆಂಕಿ ತಗುಲಿ ವೃದ್ದೆಯೊರ್ವರು ಸಾವಿಗೀಡಾದ ಘಟನೆ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟ ವೃದ್ಧೆಯನ್ನು 65 ವರ್ಷದ ಮುಮ್ತಾಜ್ ಮೆಹಬೂಬಸಾಬ ಮಿಠಾಯಿಗರ ಎಂದು ಗುರುತಿಸಲಾಗಿದ್ದು, ಸ್ನಾನ ಮಾಡುವಾಗ ಗೀಜರನಿಂದ ಗ್ಯಾಸ್ ಸೋರಿಕೆಯಾಗಿದ್ದನ್ನ ಗಮನಿಸದೇ ಇರುವುದೇ ಆವಾಂತರಕ್ಕೆ ಕಾರಣವಾಗಿದೆ.
ಸ್ನಾನ ಮಾಡುತ್ತಿದ್ದಾಗಲೇ ಬೆಂಕಿ ತಗುಲಿದ್ದರಿಂದ ವೃದ್ಧೆ ಚೀರಾಟ ಮಾಡಿದ್ದಾರೆ. ತಕ್ಷಣವೇ ಮನೆಯವರು ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಿ, ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಆದರೆ, ಕಿಮ್ಸನಲ್ಲಿ ಚಿಕಿತ್ಸೆ ಫಲಿಸದೇ ಮುಮ್ತಾಜ ಮಿಠಾಯಿಗಾರ ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಕಸಬಾಪೇಟೆ ಠಾಣೆಯ ಪೊಲೀಸರು, ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.