ಗ್ಯಾಸ್ ಟ್ಯಾಂಕ್ ಅವಘಡ: ಧಾರವಾಡದಲ್ಲಿ ತಪ್ಪಿದ ಭಾರೀ ಅನಾಹುತ..!

ಧಾರವಾಡ: ನಗರದ ನಾಯಕನ ಅಡ್ಡೆ ಬಳಿಯಿರುವ ಪೆಟ್ರೋಲ್ ಬಂಕ್ ನಲ್ಲಿ ಗ್ಯಾಸ್ ಡಂಪ್ ಮಾಡಿ ತೆರಳುವಾಗ ವಾಹನವೂ ಕಾಲುವೆಯಲ್ಲಿ ಜಾರಿದ್ದು, ಮೊದಲೇ ಆಗಿದ್ದರೇ ದೊಡ್ಡದೊಂದು ಆವಾಂತರವೇ ಸೃಷ್ಟಿಯಾಗುತ್ತಿತೆಂದು ಹೇಳಲಾಗುತ್ತಿದೆ.
ಗ್ಯಾಸ್ ಸಿಲೆಂಡರ್ ತೆಗೆದುಕೊಂಡು ಬಂದಿದ್ದ ಟ್ಯಾಂಕರ್ ಎಲ್ಲವನ್ನೂ ಖಾಲಿ ಮಾಡಿ, ಮುಂದೆ ತೆಗೆದುಕೊಳ್ಳುವಾಗ ಗಟಾರಿನಲ್ಲಿ ಹೋಗಿ ಟ್ಯಾಂಕರ್ ಅಲ್ಲಿಯೇ ಮುಗುಚಿದೆ. ತಕ್ಷಣವೇ ವಾಹನದಿಂದ ಜಿಗಿದು ಪ್ರಾಣವನ್ನ ಉಳಿಸಿಕೊಂಡಿರುವ ಚಾಲಕ ರೂಪೇಶ, ರಾತ್ರಿಯಿಂದಲೂ ಅಲ್ಲಿಯೇ ಕಾಯ್ದು, ಮುಗುಚಿರುವ ವಾಹನವನ್ನ ಕ್ರೇನ್ ಮೂಲಕ ಮೇಲಕ್ಕೇಳಿಸುವ ಪ್ರಯತ್ನ ನಡೆದಿದೆ.
ಪೆಟ್ರೋಲ್ ಬಂಕ್ ಹತ್ತಿರದಲ್ಲೇ ಅವಘಡ ಗ್ಯಾಸ್ ಖಾಲಿಯಾಗುವ ಮುನ್ನವೇ ನಡೆದಿದ್ದರೇ ದೊಡ್ಡದೊಂದು ಸಮಸ್ಯೆ ಎದುರಾಗುತ್ತಿತೆಂದು ಬಂಕ್ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಧಾರವಾಡ ಸಂಚಾರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ನಿಸ್ಸಾನ್ ಕಾರಿನಿಂದ ಎಮ್ಮೆಗೆ ಡಿಕ್ಕಿ ಹೊಡೆದ ಭೂಪ..!
ಧಾರವಾಡ: ಕೆಲವು ದಿನಗಳ ಹಿಂದಷ್ಟೇ ನಡೆದ ಭೀಕರ ರಸ್ತೆ ಅಪಘಾತ ಮಾಸುವೇ ಮುನ್ನವೇ ಇಟಿಗಟ್ಟಿ ಸಮೀಪವೇ ಕಾರೊಂದು ಎಮ್ಮೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಚಾಲಕ ಸ್ವಲ್ಪದರಲ್ಲಿಯೇ ಪಾರಾದ ಘಟನೆ ನಡೆದಿದೆ.
ವಿವೇಕ ಉರಣಕರ ಎಂಬುವವರಿಗೆ ಸೇರಿದ ಕಾರು ಎಮ್ಮೆಗೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನ ಹೊಡೆತಕ್ಕೆ ಎಮ್ಮೆಯ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆಯ ಪೊಲೀಸರು, ಮೊದಲು ಹೆದ್ದಾರಿಯಲ್ಲಿದ್ದ ಕಾರನ್ನ ರಸ್ತೆಯ ಬದಿಗೆ ಸರಿಸುವ ಪ್ರಯತ್ನ ಮಾಡಿ, ಸಂಚಾರವನ್ನ ಸುಗಮಗೊಳಿಸಿದರು.
ಪ್ರಕರಣ ದಾಖಲು ಮಾಡಿಕೊಂಡು ಕಾರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅತಿ ವೇಗವಾಗಿ ಕಾರನ್ನ ಚಲಾಯಿಸುತ್ತಿದ್ದರಿಂದಲೇ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಚಾಲಕನನ್ನ ಪೊಲೀಸರು ವಿಚಾರಣೆ ಮಾಡಿದ್ದಾರೆ.