ಹತ್ರಾಸ್ ಪ್ರಕರಣ ಖಂಡಿಸಿ ಅ-18 ಬೃಹತ್ ಪಂಜಿನ ಮೆರವಣಿಗೆ- ಎಂ.ಅರವಿಂದ
ಧಾರವಾಡ: ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯ ಬುಲಗಕ್ಕಿ ಗ್ರಾಮದಲ್ಲಿ ದಲಿತ ಯುವತಿಯ ಮೇಲೆ ನಡೆದ ಅಮಾನುಷ ಕೃತ್ಯವನ್ನ ಖಂಡಿಸಿ ಧಾರವಾಡ ಜಿಲ್ಲೆಯ ವಿವಿಧ ದಲಿತ ಸಂಘ-ಸಂಸ್ಥೆಗಳ ಒಕ್ಕೂಟ ಅಕ್ಟೋಬರ್ 18ರಂದು ಧಾರವಾಡದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಲಿದೆ ಎಂದು ಒಕ್ಕೂಟದ ಪ್ರಮುಖ ಎಂ.ಅರವಿಂದ ಹೇಳಿದರು.
ಹೋರಾಟದ ಬಗ್ಗೆ ಮಾಹಿತಿ ನೀಡಿದ ಎಂ.ಅರವಿಂದ, ಮನಿಷಾ ವಾಲ್ಮೀಕಿಯ ಮೇಲೆ ನಡೆದಿರುವ ಪ್ರಕರಣ ಅಮಾನವೀಯ. ದಲಿತ ಮಹಿಳೆ ಎನ್ನುವ ಕಾರಣಕ್ಕೆ ಉತ್ತರಪ್ರದೇಶ ಸರಕಾರ ತೀರಾ ಕೆಳಮಟ್ಟಕ್ಕೆ ಇಳಿದು ನಡೆದುಕೊಂಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗಲೂ ಅಸಡ್ಡೆಯನ್ನ ತೋರಿಸಿದೆ ಎಂದರು.
ಈ ನಿರ್ಲಜ್ಜ ವರ್ತನೆಯನ್ನ ಖಂಡಿಸಿ ಅಕ್ಟೋಬರ್ 18ರಂದು ಸಂಜೆ ಆರು ಗಂಟೆಗೆ ಪಂಜಿನ ಮೆರವಣಿಗೆ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೆರವಣಿಗೆಯೂ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿಯಿಂದ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ಎಂದು ಎಂ.ಅರವಿಂದ ಮಾಹಿತಿ ನೀಡಿದರು.
ಎಲ್.ಸಿ.ಬಕ್ಕಾಯಿ, ಪರಮೇಶ್ವರ ಕಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.