ಉಪನಗರ ಠಾಣೆ ಪೊಲೀಸರ ಕಾರ್ಯಚರಣೆ 5ಬೈಕ್ ಸಮೇತ ಕಳ್ಳನ ಬಂಧನ- ಈತನೇ ಅಂಗಡಿಯನ್ನೂ ದೋಚಿದ್ದ..
ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿದ್ದ ಬೈಕುಗಳನ್ನ ಕಳ್ಳತನ ಪೊಲೀಸರ ನಿದ್ದೆಯನ್ನ ಕೆಡಿಸಿದ್ದು, ಇದೇ ಕಾರಣದಿಂದ ನಿರಂತರವಾಗಿ ನಡೆಯುತ್ತಿದ್ದ ಕಳ್ಳತನ ತಡೆಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಉಪನಗರ ಠಾಣೆಯಲ್ಲಿ ಆರೋಪಿಯನ್ನ ಬಂಧನ ಮಾಡಿ, ಐದು ಬೈಕುಗಳನ್ನ ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿ ಸಹದೇವನಗರದ ವಿಜಯ ಹುಸೇನಪ್ಪ ಅಣ್ಣಿಗೇರಿ ಎಂಬ ಆರೋಪಿಯನ್ನ ಬಂಧನ ಮಾಡಲಾಗಿದ್ದು, ಲೋಕಾಪುರ ಪೊಲೀಸ್ ಠಾಣೆ, ಹಳೇಹುಬ್ಬಳ್ಳಿ ಹಾಗೂ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ರೇವಣಕರ ಕಾಂಪ್ಲೇಕ್ಸ್ ಮುಂದೆ ಬಂಧನವಾಗಿರುವ ಆರೋಪಿ ಜನತಾ ಬಜಾರನಲ್ಲಿರುವ ಪೈ ಅಡಿಕೆ ಅಂಗಡಿಯನ್ನ ಕಳ್ಳತನ ಮಾಡಿದ್ದನ್ನೂ ಆರೋಪಿ ಒಪ್ಪಿಕೊಂಡಿದ್ದಾನೆ. ಒಟ್ಟು ಬೈಕುಗಳು ಹಾಗೂ ನಗದು ಸೇರಿ 2ಲಕ್ಷ 35200 ಮೌಲ್ಯದ್ದಾಗಿದೆ.
ಪೊಲೀಸ್ ಇನ್ಸಪೆಕ್ಟರ್ ಎಸ್.ಕೆ.ಹೊಳೆಣ್ಣನವರ, ಪಿಎಸ್ಐ ಸೀತಾರಾಮ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಉಮೇಶ ಹೆದ್ದೇರಿ, ರೇವಣ ಸಿಕ್ಕಲಗಾರ, ರವಿ ಹೊಸಮನಿ, ಮಾಬುಸಾಬ ಮುಲ್ಲಾ, ಮಂಜು ಕಮತದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.