ಧಾರವಾಡ NTTF ಬಳಿ BRTS ಬಸ್ ಡಿಕ್ಕಿ: ಇಬ್ಬರ ಸ್ಥಿತಿ ಗಂಭೀರ

ಧಾರವಾಡ: ಹುಬ್ಬಳ್ಳಿಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಬಿಆರ್ ಟಿಎಸ್ ಬಸ್ ಚಾಲಕ ಓರ್ವ ಪಾದಚಾರಿಯನ್ನ ತಪ್ಪಿಸಲು ಹೋಗಿ ಮತ್ತೋರ್ವ ಪಾದಚಾರಿ ಹಾಗೂ ಸೆಕ್ಯುರಿಟಿಗೆ ಡಿಕ್ಕಿ ಹೊಡೆದ ಘಟನೆ ಎನ್ ಟಿಟಿಎಫ್ ಬಳಿ ಸಂಭವಿಸಿದೆ.
ಎಡಗಡೆಯಿಂದ ಮೊಬೈಲನಲ್ಲಿ ಮಾತನಾಡುತ್ತ ಬಲಗಡೆ ಬರುತ್ತಿದ್ದ ವ್ಯಕ್ತಿಯನ್ನ ತಪ್ಪಿಸಲು ಹೋಗಿ ವಾಹನವನ್ನ ಬಲಗಡೆ ತೆಗೆದುಕೊಂಡಾಗ, ಮತ್ತೋರ್ವ ಪಾದಚಾರಿಗೆ ಡಿಕ್ಕಿ ಹೊಡೆದು, ಬಿಆರ್ ಟಿಎಸ್ ಸೆಕ್ಯುರಿಟಿಗೂ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಸೆಕ್ಯುರಿಟಿಗೂ ಗಂಭೀರ ಗಾಯಗಳಾಗಿವೆ.
ಘಟನೆಯಲ್ಲಿ ಹಂಚಿನಮನಿ ಕಾಲೇಜಿನ ಆಡಳಿತ ಮಂಡಳಿಯ ಕ್ಯಾಷಿಯರ್ ಸುಧೀರ ರಾಮಾಚಾರಿ ಹಂಚಿನಿಮನಿ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಸೆಕ್ಯುರಿಟಿ ಪಾಪು ಎಂದು ಗುರುತಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಹಂಚಿನಮನಿ ಅವರನ್ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತಾದರೂ, ನಂತರ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಗಾಯಾಗಳುಗಳನ್ನ ಬಿಆರ್ ಟಿಎಸ್ ಸೆಕ್ಯುರಿಟಿ ವಾಹನದಲ್ಲಿಯೇ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಬಸ್ ಡಿಕ್ಕಿ ನಡೆದ ತಕ್ಷಣವೇ ಬಸ್ಸನ್ನ ಟೋಲನಾಕಾದಲ್ಲಿ ಬಿಟ್ಟು ಚಾಲಕ ಪರಾರಿಯಾಗಿದ್ದು, ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.