ಬಂಜಾರ ಸಮಾಜದ ಜಗದ್ಗುರು ಡಾ.ರಾಮರಾವ ಮಹಾರಾಜ ನಿಧನ
ಮುಂಬೈ: ಬಂಜಾರ ಸಮಾಜದ ಆರಾದ್ಯ ದೈವರಾಗಿದ್ದ ಜಗದ್ಗುರು ಡಾ.ರಾಮರಾವ್ ಮಹಾರಾಜ ಮುಂಬೈ ನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ನಿಧನರಾಗಿದ್ದಾರೆ.
ಡಾ.ರಾಮರಾವ್ ಮಹಾರಾಜ್ (80) ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಹಾರಾಷ್ಟ್ರದ ಮುಂಬೈ ಬಳಿಯ ಪೌರಾದೇವಿಯಲ್ಲಿರುವ ಶಕ್ತಿಪೀಠದ ಜಗದ್ಗುರು ಆಗಿದ್ದ ಇವರು, ದೇಶಾಧ್ಯಂತವಿರು ಲಕ್ಷಾಂತರ ಲಂಬಾಣಿ ಸಮಾಜದ ಗುರುಗಳಾಗಿದ್ದರು. ಕೆಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ನಿಧನರಾಗಿದ್ದಾರೆ.
ಡಾ.ರಾಮರಾವ್ ಮಹಾರಾಜ್ ನಿಧನಕ್ಕೆ ಲಂಬಾಣಿ ಸಮಾಜದ ಜನರ ಕಣ್ಣೀರು ಹಾಕಿದ್ದು, ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಸೇರಿ ಹಲವರ ಸಂತಾಪ ಸೂಚಿಸಿದ್ದಾರೆ.