ಹುಬ್ಬಳ್ಳಿಯಲ್ಲಿ ಬಡ್ಡಿ ಕುಳಗಳಿಂದ ಲಾಡ್ಜ್ ಮಾಲೀಕನಿಗೆ ಥಳಿತ

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಬಡ್ಡಿ ಕುಳಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಇದಕ್ಕೆ ಕಡಿವಾಣ ಹಾಕುವ ಸಮಯ ಬಂದಾಗಿದೆ ಎನ್ನುತ್ತಿರುವಾಗಲೇ ಲಾಡ್ಜ್ ನಡೆಸುತ್ತಿರುವ ವ್ಯಕ್ತಿಯನ್ನ ಇಬ್ಬರು ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸುಖೇಶ ಸುರೇಶ ನಾಯಕ ಎಂಬ ವ್ಯಕ್ತಿಯನ್ನೇ ಥಳಿಸಲಾಗಿದೆ. ಡಾ.ಆರ್.ಬಿ.ಪಾಟೀಲ ಆಸ್ಪತ್ರೆಯ ಬಳಿಯಿರುವ ನ್ಯೂ ಅಶೋಕ ಕೆಫೆ ಬಳಿ ರಾತ್ರಿ ಬಂದು ಹಣ ಕೊಡುವಂತೆ ಒತ್ತಾಯಿಸಿ ಹೊಡೆಯಲಾಗಿದ್ದು, ಈ ಬಗ್ಗೆ ಹೊಡೆದ ದಿನವೇ ಸುಖೇಶ ನಾಯಕ, ಕಿಮ್ಸನಲ್ಲಿ ಚಿಕಿತ್ಸೆ ಪಡೆದು ಮಾಹಿತಿಯನ್ನೂ ನೀಡಿದ್ದಾರೆ.
ಬಡ್ಡಿ ದಂಧೆ ಮಾಡುವ ನಟರಾಜ ಮಹಾಬಳೇಶ ಯಾವಗಲ್ ಮತ್ತು ಮಿಥುನ ದೇವಾಡಿಗ ಎಂಬುವವರೇ ಸುಖೇಶನನ್ನ ಹೊಡೆದಿದ್ದಾರೆಂದು ಹೇಳಲಾಗಿದೆ. ದಾಮೋದರ ಹೊಟೇಲ್ ನಡೆಸುತ್ತಿರುವ ಸುಖೇಶ, ನಟರಾಜ ಎಂಬುವವರಿಂದ ಬಡ್ಡಿಗೆ ಹಣ ಪಡೆದಿದ್ದ, ಇದೇ ಹಣವನ್ನ ಪಡೆಯಲು ಹೋಗಿ, ಸುಖೇಶನನ್ನ ಥಳಿಸಲಾಗಿದೆಯಂತೆ.
ಕುರಿತು ಕಿಮ್ಸನಲ್ಲಿ ಎಂಎಲ್ ಸಿ ಮಾಡಿಸಲಾಗಿದ್ದು, ವಿದ್ಯಾನಗರ ಠಾಣೆ ಪೊಲೀಸರು ತನಿಖೆಯನ್ನ ನಡೆಸಲಿದ್ದಾರೆ.