ಶಾಮನೂರು ಅಳಿಯನಾಗಿರುವ ಜಗದೀಶ ಶೆಟ್ಟರ ಪುತ್ರನ ಲ್ಯಾಂಡ ರೋವರ್ ಕಾರಿಗೆ ಲಾರಿ ಡಿಕ್ಕಿ

ದಾವಣಗೆರೆ: ತನ್ನ ಮಾವನ ಮನೆಯಿಂದ ತನ್ನೂರಿನತ್ತ ತೆರಳುತ್ತಿದ್ದ ಮಾಜಿ ಸಿಎಂ ಹಾಗೂ ಹಾಲಿ ಸಚಿವ ಜಗದೀಶ ಶೆಟ್ಟರ ಪುತ್ರನ ವಾಹನ ಲಾರಿಗೆ ಡಿಕ್ಕಿ ಹೊಡೆದಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಶಾಮನೂರು ಶಿವಶಂಕರಪ್ಪನವರ ಪುತ್ರನ ಮಗಳನ್ನ ಮದುವೆ ಮಾಡಿಕೊಂಡಿರುವ ಜಗದೀಶ ಶೆಟ್ಟರ ಅವರ ಪುತ್ರ ಪ್ರಶಾಂತ ಶೆಟ್ಟರ ಹಾಗೂ ಪ್ರಶಾಂತ ಪತ್ನಿ ಅಂಚಲ್ ಬರುತ್ತಿದ್ದಾಗ ದಾವಣಗೆರೆ ನಗರದ ಹಳೇ ಕುಂದವಾಡ ಬಳಿ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಕೆಎ-03 ಎನ್ಇ-8 ಲ್ಯಾಂಡ ರೋವರ್ ಕಾರಿಗೆ ಡಿವೈಡರ್ ಬಳಿ ಲಾರಿ ಡಿಕ್ಕಿ ನಡೆದಿದೆ.
ಬೆಲೆ ಬಾಳುವ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದ್ದು, ಸಣ್ಣಪುಟ್ಟ ಗಾಯಗೊಂಡಿದ್ದವರನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಕಿರಣಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.