ನವಲಗುಂದ ಬಳಿ ದುರ್ಘಟನೆ ಓರ್ವನ ಸಾವು: ಬೇಲಿಯಿಂದ ಹೊರ ತೆಗೆದಿದ್ದು ಯಾರೂ ಗೊತ್ತಾ..

ಧಾರವಾಡ: ಜಿಲ್ಲೆಯ ನವಲಗುಂದ ಹೊರವಲಯದಲ್ಲಿ ನಡೆದ ಆಟೋ ಪಲ್ಟಿ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೋರ್ವ ಸಾವಿಗೀಡಾಗಿದ್ದು, ಇನ್ನುಳಿದ 9ಕ್ಕೂ ಹೆಚ್ಚು ಜನರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಚೊಳಚಗುಡ್ಡದ ನಿವಾಸಿಗಳು ನವಲಗುಂದ ತಾಲೂಕಿನ ಆರೇಕುರಹಟ್ಟಿ ಗ್ರಾಮಕ್ಕೆ ಸಮಾರಂಭವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಮರಳಿ ಊರಿಗೆ ಹೋಗುವಾಗ ಗುಂಡಿಯಲ್ಲಿ ಆಟೋ ಪಲ್ಟಿಯಾಗಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಆಟೋ ಮುಳ್ಳಿನ ಬೇಲಿಯಲ್ಲಿ ಬಿದ್ದಾಗ, ಅವರನ್ನ ಬದುಕಿಸಿದ್ದು ಶರೀಫ ಎನ್ನುವ ವ್ಯಕ್ತಿಯಂದು ಗೊತ್ತಾಗಿದೆ. ಆಟೋದ ಹಿಂದೆ ಬೈಕಿನಲ್ಲಿ ಹೋಗುತ್ತಿದ್ದ ಶರೀಫ, ಆಟೋ ಪಲ್ಟಿಯಾದ ಕೆಲವೇ ಸೆಕೆಂಡಗಳಲ್ಲಿ ಮಕ್ಕಳನ್ನ ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ.
ಅದೇ ಸಮಯದಲ್ಲಿ ಅದೇ ರಸ್ತೆಯ ಮೂಲಕ ಹೋಗುತ್ತಿದ್ದ ಯಾರೂ ವಾಹನವನ್ನ ನಿಲ್ಲಿಸದೇ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಆದರೂ, ಛಲ ಬಿಡದ ಶರೀಫ, ಎಲ್ಲರನ್ನೂ ರಸ್ತೆ ತಂದು ಹಾಕಿ, ಪಿಎಸೈಯವರಿಗೆ ಕಾಲ್ ಮಾಡಿ, ಅಂಬ್ಯಲೆನ್ಸ್ ಬರುವಂತೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಮಾತನಾಡಿದ ಶರೀಫ, ಮಕ್ಕಳು ಅಳುವುದನ್ನ ನೋಡಿ, ನಂಗೆ ನನ್ನ ಮಕ್ಕಳ ನೆನಪಾಯಿತು. ಹಾಗಾಗಿಯೇ ತಡ ಮಾಡದೇ ಅವರನ್ನ ಬೇಲಿಯಿಂದ ಹೊರಗೆ ತೆಗೆದೆ’ ಅಂತಾರೆ.
ಇಂಥಹ ವ್ಯಕ್ತಿಗೆ ನೀವೂ ಅಭಿನಂದನೆ ತಿಳಿಸಬೇಕಾ. ಹಾಗಾದ್ರೇ, ಈ ನಂಬರಗೆ ಕಾಲ್ ಮಾಡಿ-9731589219