ನವಲಗುಂದ ಹುಡುಗಿಯ ಶವ ಪತ್ತೆ- ಕ್ವಾಯಿನ್ ನೆಪದಲ್ಲಿ ಹೋದವಳು ಶವವಾಗಿ ಬಂದಳು
ವಿಜಯಪುರ: ನದಿಯಲ್ಲಿ ಬೇಡಿಕೊಂಡ ಕ್ವಾಯಿನ್ ಹಾಕಿ ಬರುವುದಾಗಿ ಇಳಿದ ಯುವತಿಯೋರ್ವಳು ನದಿಯಲ್ಲಿ ಹಾರಿದ್ದ ಘಟನೆಗೆ ಸಂಬಂಧಿಸಿದಂತೆ ಯುವತಿಯ ಶವ ಎರಡು ದಿನಗಳ ನಂತರ ಸಿಕ್ಕಿದೆ.
ವಿಜಯಪುರ ಜಿಲ್ಲೆಯ ದೇವಣಗಾಂವ್ ಅಫಜಲಪುರ ಮಧ್ಯದ ಸೇತುವೆಯ ಬಳಿ ಕಾರು ನಿಲ್ಲಿಸಿ ಭೀಮಾ ನದಿಯಲ್ಲಿ ಕ್ವಾಯಿನ್ ಹಾಕಿ ಬರುವುದಾಗಿ ಹೋಗಿದ್ದ ನವಲಗುಂದ ಪಟ್ಟಣದ ಐಶ್ವರ್ಯ ಶ್ರೀಪಾಲ ಕಬ್ಬಿನ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ತನ್ನ ಅಕ್ಕನ ಮನೆಯಾದ ಇಂಡಿಗೆ ಹೋಗಿದ್ದ ಯುವತಿ, ನಂತರ ಕುಟುಂಬದರೊಂದಿಗೆ ಕಲಬುರಗಿಯ ಜಿಲ್ಲೆಯ ಗಾಣಗಾಪುರಕ್ಕೆ ಹೋಗುತ್ತಿದ್ದಳು. ಇದೇ ಸಮಯದಲ್ಲಿ ಏನೋ ನೆನಪು ಮಾಡಿಕೊಂಡಂತೆಎ ಹರಕೆಯ ಕ್ವಾಯಿನ್ ಹಾಕುವುದಾಗಿ ಕೆಳಗಿದಳು, ನೇರವಾಗಿ ನದಿಗೆ ಹಾರಿದ್ದಳು.
ಪ್ರಕರಣ ದಾಖಲು ಮಾಡಿಕೊಂಡು ಕಾರ್ಯಾಚರಣೆ ಆರಂಭಿಸಿದ್ದ ಆಲಮೇಲು ಠಾಣೆ ಪೊಲೀಸರು, ಮೀನುಗಾರರು ಮತ್ತು ಈಜುಗಾರರ ಸಹಾಯದಿಂದ ಯುವತಿಯ ಶವವನ್ನ ಪತ್ತೆ ಮಾಡಿದ್ದಾರೆ. ಸಣ್ಣ ವಯಸ್ಸಿನ ಯುವತಿಯ ಆತ್ಮಹತ್ಯೆಗೆ ನಿಖರವಾದ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಈ ಘಟನೆಯಿಂದ ಮನೆಯ ನೆಮ್ಮದಿಯ ಕಳೆದು ಹೋದಂತಾಗಿದೆ.