ಕಲಘಟಗಿಯಲ್ಲಿ ಬಿರುಸಿನ ಮತದಾನ- ಮೊದಲ ಮತದಾನ ಮಾಡಿದ ರಾಮನಗೌಡ ಪಾಟೀಲ ದಂಪತಿ
ಧಾರವಾಡ: ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾನ ಜಿಲ್ಲೆಯಾಧ್ಯಂತ ಬಿರುಸಿನಿಂದ ಸಾಗಿದ್ದು, ಕಲಘಟಗಿ ತಾಲೂಕಿನಲ್ಲಿ ಹುರುಪಿನಿಂದ ಮತಗಟ್ಟೆಯತ್ತ ಧಾವಿಸುತ್ತಿದ್ದಾರೆ. ಬೆಳಗಿನಿಂದ ಈಗಾಗಲೇ ನೂರಕ್ಕೂ ಹೆಚ್ಚು ಮತದಾರರು ಮತದಾನ ಮಾಡಿದ್ದು, ಕ್ಷೇತ್ರದಲ್ಲಿ ಉತ್ತಮ ಮತದಾನವಾಗುವ ನಿರೀಕ್ಷೆಯಿದೆ.
ಕಲಘಟಗಿ ಕ್ಷೇತ್ರದಲ್ಲಿ ಒಟ್ಟು 735 ಮತಗಳಿದ್ದು, ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಮತಗಟ್ಟೆ ನಿರ್ಮಾಣ ಮಾಡಲಾಗಿದೆ. ಇಂದು ಬೆಳಿಗ್ಗೆ ಕಾಂಗ್ರೆಸ್ ಮುಖಂಡ ರಾಮನಗೌಡ ಪಾಟೀಲ ಪತ್ನಿ ಸವಿತಾ ಅವರೊಂದಿಗೆ ಆಗಮಿಸಿ ಮತದಾನ ಮಾಡಿದ್ರು.
ಪಟ್ಟಣದಲ್ಲಿ ಮತದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೆಲವು ಕಡೆ ಮಾಹಿತಿ ಕೇಂದ್ರಗಳನ್ನ ಆಯಾ ಪಕ್ಷಗಳು ಮಾಡಿಕೊಂಡಿದ್ದು, ಮತದಾರರ ಸಂಖ್ಯೆ ಮತ್ತು ಸೂಚನೆಯನ್ನ ನೀಡುತ್ತಿದ್ದಾರೆ.
ಸಂಜೆಯವರೆಗೆ ಜಿಲ್ಲೆಯಲ್ಲೇ ಅತೀ ಹೆಚ್ಚು ಮತದಾನವಾಗುವ ಸಾಧ್ಯತೆಯಿದ್ದು, ಪದವೀಧರ ಕ್ಷೇತ್ರದಲ್ಲಿ ಈ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಯಾಗಲಿದೆ ಎನ್ನಲಾಗಿದೆ.