ರಜತ ಉಳ್ಳಾಗಡ್ಡಿಮಠ, ಚೇತನ ಹಿರೇಕೆರೂರ ಸೇರಿ 10ಜನರ ಮೇಲೆ ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ “ದೂರರ್ಜಿ”…
1 min read
ಹುಬ್ಬಳ್ಳಿ: ತಮ್ಮ ಕೌಟುಂಬಿಕ ವಿಷಯದಲ್ಲಿ ವಿನಾಕಾರಣ ಮೂಗು ತೂರಿಸುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ, ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಪಾಲಿಕೆ ಸದಸ್ಯ ಚೇತನ ಹಿರೇಕೆರೂರು ಸೇರಿದಂತೆ ಹತ್ತು ಜನರ ಮೇಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ಅರ್ಜಿಯನ್ನ ಸಲ್ಲಿಸಿದ್ದಾರೆ.
ಗಿರೀಶ ಗದಿಗೆಪ್ಪಗೌಡರ ತಮ್ಮ ಪತ್ನಿಗೆ ವಿಚ್ಚೇಧನ ನೀಡಲು ಕೇಸ್ ದಾಖಲಿಸಿದ್ದಾರಂತೆ. ಈ ವಿಷಯದಲ್ಲಿ ತಮಗೆ ಹಾಗೂ ಗದಿಗೆಪ್ಪಗೌಡರ ಅಳಿಯ ಹರ್ಷವರ್ಧನ ಮಲಕಣ್ಣನವರ ಮತ್ತು ವಿಶಾಲ ಭಾವಿಮನಿ ಎಂಬುವವರಿಗೆ ರಾಮತೀರ್ಥ ಐರಸಂಗ ಮತ್ತು ಇನ್ನುಳಿದ ಒಂಬತ್ತು ಜನರು ಕಿರುಕುಳ ಕೊಡುತ್ತಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ.
ದೂರಿನ ಪ್ರತಿ ಇಲ್ಲಿದೆ ನೋಡಿ..

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ಪಡೆದಿದ್ದು, ಇದನ್ನ ಎಫ್ಐಆರ್ ದಾಖಲು ಮಾಡುವಂತೆ ಗಿರೀಶ ಗದಿಗೆಪ್ಪಗೌಡರ ಕೇಳಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡುತ್ತಿಲ್ಲವೆಂದು ಆರೋಪಿಸಲಾಗಿದೆ.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಹಿಂದೆ ಸ್ವಾತಿ ಹೊಟೇಲ್ ಬಳಿ ರಾಮತೀರ್ಥ ಮತ್ತು ಗಿರೀಶ ಗದಿಗೆಪ್ಪಗೌಡರ ನಡುವೆ ಜಗಳವಾಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.
acv