ಇದು ಕರ್ನಾಟಕವಾಯ್ಸ್.ಕಾಂ ಎಕ್ಸಕ್ಲೂಸಿವ್: ಪಾಸಿಟಿವ್ ರೋಗಿಗಳು ಮುಂದೆ ಹೆಣಗಳ ಪ್ಯಾಕಿಂಗ್- ನಡೆಯುತ್ತಿದೆ ಭಯದ ಕ್ರೂರತನ…!

1 min read
Spread the love

ಹುಬ್ಬಳ್ಳಿ: ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದು, ಕೆಲವರು ದಿನನಿತ್ಯ ಸಾಯುತ್ತಿರುವುದಕ್ಕೆ ಕೇವಲ ಕೊರೋನಾವೇ ಕಾರಣವಾ ಅಥವಾ ಭಯವಾ ಎಂಬ ಜಿಜ್ಞಾಸೆ ಸದಾಕಾಲ ಎಲ್ಲರನ್ನೂ ಕಾಡುತ್ತಲೇ ಇದೆ. ಕೊರೋನಾಗೆ ಔಷಧವಿದೆಯಂದರೂ, ಸಾಯುತ್ತಿರುವ ಹಿಂದಿನ ಗುಟ್ಟೇನು ಎಂದು ನೋಡಲು ಹೊರಟಾಗಲೇ ಇಂತಹದೊಂದು ವೀಡಿಯೋವನ್ನ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದ್ದು.

ಕೊರೋನಾ ಪಾಸಿಟಿವ್ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಕಿಮ್ಸನಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ನೀವೇ, ನೋಡಿ. ಕೊರೋನಾ ಭಯದಲ್ಲಿರುವ ರೋಗಿಗಳು ಮುಂದೆ ಸತ್ತವರನ್ನ ಪ್ಯಾಕಿಂಗ್ ಮಾಡಲಾಗುತ್ತಿದೆ. ಮೊದಲು ಈ ವೀಡಿಯೋವನ್ನ ಒಂದ್ಸಲ ನೋಡಿಬಿಡಿ.

ಎಕ್ಸಕ್ಲೂಸಿವ್ ವೀಡಿಯೋ..

ಕೊರೋನಾ ಪಾಸಿಟಿವ್ ರೋಗಿಗಳು ಭಯದಲ್ಲೇ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಂಥಹದರಲ್ಲಿ ಅವರ ಎದುರೇ ಹೀಗೆಲ್ಲ ಮಾಡುವುದರಿಂದ ರೋಗಿಗಳ ಮೇಲೆ ಅದ್ಯಾವ ರೀತಿಯ ಪರಿಣಾಮ ಬೀರತ್ತೆ ಎಂಬುದನ್ನ ನೀವೇ ಊಹಿಸಿಕೊಳ್ಳಿ.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರೇ, ಇದನ್ನೋಮ್ಮೆ ನೋಡಿ. ಇದು ಕ್ರೂರತನವಲ್ಲದೇ ಮತ್ತೇನು ಎಂಬುದನ್ನ ತಿಳಿದುಕೊಂಡು, ಸಂಬಂಧಿಸಿವರಿಗೆ ಮಾನವೀಯತೆಯನ್ನ ನೆನಪು ಮಾಡಿಕೊಡಿ. ಇಲ್ಲದಿದ್ದರೇ, ನಿಮ್ಮದೇ ಜಿಲ್ಲೆಯ ಜನರು ಬರೀ ಭಯದಲ್ಲಿ ಇನ್ನಿಲ್ಲವಾಗುತ್ತಾರೆ..

ಸಾರ್ವಜನಿಕ ಹಿತಾಸಕ್ತಿಯನ್ನ ಕಾಪಾಡುವ ಉದ್ದೇಶದಿಂದ ಈ ವೀಡಿಯೋವನ್ನ ಪ್ರಸಾರ ಮಾಡಲಾಗುತ್ತಿದೆ ಹೊರತಾಗಿ, ಇನ್ಯಾವುದೇ ಉದ್ದೇಶದಿಂದಲ್ಲ ಎಂಬುದು ‘ಶಾಣ್ಯಾ’ ಮಂದಿಗೆ ತಿಳಿದಿರಲಿ.


Spread the love

Leave a Reply

Your email address will not be published. Required fields are marked *