Posts Slider

ಹಾವೇರಿ ಜಿಲ್ಲಾ ವರದಿಗಾರರ ಮಾನವೀಯತೆ…!

1 min read
Spread the love

ಹಾವೇರಿ: ಪ್ರತಿದಿನದಂತೆ ತಮ್ಮ ಕರ್ತವ್ಯಕ್ಕೆ ಶಿಗ್ಗಾಂವಿಯತ್ತ ಹೋಗುತ್ತಿದ್ದ ವರದಿಗಾರರ ಮುಂದೆ ನಡೆದ ಭೀಕರ ಅಫಘಾತದಲ್ಲಿ ವಾಹನದಲ್ಲಿಯೇ ಸಿಲುಕಿಕೊಂಡಿದ್ದ ಹಲವರನ್ನ ರಕ್ಷಣೆ ಮಾಡಿ, ತಾವು ತಂದಿದ್ದ ವಾಹನದಲ್ಲಿ ಆಸ್ಪತ್ರೆಗೆ ರವಾನೆ ಮಾಡಿದ ಪತ್ರಕರ್ತರು, ತಮ್ಮ ಪತ್ರಿಕಾ ಧರ್ಮಕ್ಕೆ ನ್ಯಾಯ ಒದಗಿಸಿದ ಘಟನೆ ನಡೆದಿದೆ.

ಗುಜರಾತ್ ಮೂಲಕ ಕಾರು ನಜ್ಜು ಗುಜ್ಜಾಗಿ ಅದರಲ್ಲಿಯೇ ಸಿಕ್ಕಿಕೊಂಡ ಮಹಿಳೆಯೋರ್ವಳು ನರಳುತ್ತಿದ್ದಳು. ಅದನ್ನ ನೋಡಿದ ತಕ್ಷಣವೇ ಕಾರಿನ ಡೋರ್ ಮುರಿದು ಮಹಿಳೆಯನ್ನ ಹೊರಗೆ ತೆಗೆದು ಆಸ್ಪತ್ರೆಗೆ ರವಾನೆ ಮಾಡುವ ಮೂಲಕ ಪತ್ರಕರ್ತರು ಮಾನವೀಯತೆ ಮೆರೆದಿದ್ದಾರೆ.

ತೀವ್ರವಾದ ರಕ್ತಸ್ರಾವವಾಗುತ್ತಿದ್ದ ಮಹಿಳೆಗೆ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿತು. ಘಟನಾ ಸ್ಥಳದಲ್ಲಿ ಜಿಲ್ಲಾ ವರದಿಗಾರರಾದ  ಪಕ್ಕಿರಯ್ಯ ಗಣಾಚಾರಿ, ರವಿ ಹೂಗಾರ, ಮಾರುತಿ ಮರಾಠಿ, ವೀರೇಶ ಬಾರ್ಕಿ,ರಾಜು ಎಂ ಜಿ, ರಮೇಶ ಬಿ.ಹೆಚ್,ನಾಗರಾಜ ಮೈದುರು, ಮಂಜು ತಳವಾರ, ಶಿವು ಮಡಿವಾಳರ, ಚಾಲಕ ಹನುಮಂತಪ್ಪ ಉಪಸ್ಥಿತರಿದ್ದು, ಮಹಿಳೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪತ್ರಕರ್ತನ ಬದುಕೇ ಹೀಗೆ. ಬೇರೆಯವರನ್ನ ಉಳಿಸಿ, ಸಂತಸ ಪಡುವುದರಲ್ಲಿ ಇರುವ ಸುಖವನ್ನ ಅನುಭವಿಸಿದವರಿಗೆ ಗೊತ್ತು…


Spread the love

Leave a Reply

Your email address will not be published. Required fields are marked *

You may have missed