Posts Slider

ಕನ್ನಡ ನಾಡು -ನುಡಿಯ ಸೇವೆಗೆ ಬೆಂಬಲಿಸಿ: ನಾಗರಾಜ್ ಕಿರಣಗಿ

1 min read
Spread the love

ಧಾರವಾಡ:  ಕನ್ನಡ ನಾಡು – ನುಡಿಯ ಸೇವೆಗೆ ಅವಕಾಶ ನೀಡಿ ಭ್ರಷ್ಟಾಚಾರ ಮುಕ್ತ , ಪ್ರಾಮಾಣಿಕ , ದಕ್ಷ , ಹಾಗೂ ಸಮರ್ಥ ಆಯ್ಕೆಗಾಗಿ ನನ್ನನ್ನು ಬೆಂಬಲಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ -2021 ರ   ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಗರಾಜ ಕಿರಣಗಿ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಹಲವಾರು ವರ್ಷಗಳಿಂದ ನಿಂತ ನೀರಾಗಿದೆೆ, ಮಕ್ಕಳಿಗೆ, ಯುವಕರಿಗೆ, ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮತ್ತು ಮಹಿಳಾ ಸಾಹಿತ್ಯ ಪ್ರಿಯರಿಗೆ , ಸಾಹಿತಿಗಳಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಕೆಲಸಗಳು ಕಂಡು ಬಂದಿಲ್ಲ . ಹೀಗಾಗಿ ವರ್ಷದ 365 ದಿನಗಳು ಕನ್ನಡ ಸಾಹಿತ್ಯ ಪರಿಷತ್ತು ನಿತ್ಯ ನಿರಂತರವಾಗಿ ಕೆಲಸ ಮಾಡುವ ಕೇಂದ್ರವನ್ನಾಗಿಸುವ ಆಶಯ ಹೊಂದಿರುವೆ ಎಂದರು.

ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಅಭಿಲಾಷೆಯೊಂದಿಗೆ ಯುವಕ – ಯುವತಿಯರಿಗೆ , ಮಹಿಳೆಯರಿಗೆ ಹಿರಿಯ ಸಾಹಿತಿಗಳಿಂದ ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ಕಥೆ , ಕವನ , ಪ್ರಬಂಧ , ಸಾಹಿತ್ಯದ ವಿವಿಧ ಮಜಲುಗಳನ್ನು ಪರಿಚಯಿಸುವ ಜೊತೆಗೆ ನವನವೀನ ಸಂವೇದನೆಯ ಹೊಸ ಸಾಹಿತ್ಯ ಹೊರಹೊಮ್ಮುವಂತೆ ಮಾಡುವ ಧೈಯವನ್ನು ಹೊಂದಿದ್ದೇನೆ . ಅದಕ್ಕಾಗಿ ಪೂರ್ಣ ಪ್ರಮಾಣದ ಅಧ್ಯಕ್ಷರ ಅವಶ್ಯಕತೆ ಇದ್ದು , ವಿವಿಧ ಶಾಲೆ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಅವಕಾಶ ನೀಡದೆ ಕನ್ನಡ ಕಟ್ಟುವ ಉಳಿಸುವ ಮತ್ತು ಮುಂದಿನ ಪೀಳಿಗೆಗೆ ಅದನ್ನು ಸಮರ್ಥವಾಗಿ ತೆಗೆದುಕೊಂಡು ಹೋಗಿ ತಲುಪಿಸುವ ಸದೃಢ , ಕ್ರಿಯಾಶೀಲ , ಹೃದಯವಂತ ಕನ್ನಡದ ಮನಸ್ಸು ಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಮಾತನಾಡಿ, ಕಳೆದ 21 ವರ್ಷಗಳ ಕಾಲ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉದಯ ಟಿವಿ , ಈ ಟಿವಿ , ಜೀ ಕನ್ನಡ , ಸುವರ್ಣ ನ್ಯೂಸ್ , ಉದಯವಾಣಿ ವಿಜಯವಾಣಿಗಳಲ್ಲಿ ಕೆಲಸ ನಿರ್ವಹಿಸಿ ಪ್ರಜಾಕಿರಣ , ಕಾಮ್ ಮೂಲಕ ನಾಡಿನ ಉದ್ದಗಲಕ್ಕೂ ಅಪಾರ ಪ್ರಮಾಣದ ಅಭಿಮಾನಿಗಳ ಪಡೆ ಹೊಂದಿರುವ ನಾಗರಾಜ ಕಿರಣಗಿ  ಈಗಾಗಲೇ ಬಾಲನಂದನ ಟ್ರಸ್ಟ್ ಮುಖಾಂತರ ನೂರಾರು ಮಕ್ಕಳಿಗೆ , ಯುವಕರಿಗೆ ಸಾಹಿತ್ಯ , ಸಂಸ್ಕೃತಿಗಳ ಪರಿಚಯ ಮಾಡಿಕೊಡುವ ಜೊತೆಗೆ ಶಾಲಾ ಪರಿಸರ , ಕವಳ , ಉಳವಿ , ಪಶ್ಚಿಮ ಘಟ್ಟದ ಉಳಿವಿಗೆ ಹೋರಾಡಿದ್ದಾಗಿ ಸಾಲುಮರದ ತಿಮ್ಮಕ್ಕ ಪ್ರಶಸ್ತಿ , ಗದುಗಿನ ತೋಂಟದಾರ್ಯ ಮಠದ ಲಿಂಗಾಯತ ಮಾಲಿಕೆ ಅಡಿ ಪ್ರೊ . ರಾಜಶೇಖರ ಭೂಸನೂರಮಠ ಅವರ ಜೀವನ ಕೃತಿ , ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಗಳ ಪ್ರವಚನ ವಿಚಾರ ವಿರ್ಸಜನೆ ಕೃಷಿ ಸೇರಿ ನಾಲ್ಕು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ನಾಗರಾಜ ಅವರು ಯುವಕ – ಯುವತಿಯರಿಗೆ , ಮಹಿಳೆಯರಿಗೆ ಸಾಹಿತ್ಯ ಮತ್ತು ಸಾಹಿತ್ಯದ ಹೊರತಾಗಿಯೂ ಸಂಗೀತ , ನಾಟಕ ಸಂಸ್ಕೃತಿ ಪರಿಚಯಿಸುವ ಹತ್ತು ಹಲವು ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶಿಷ್ಟ ಛಾಪು ಮೂಡಿಸಿದ್ದಾರೆ . ಇಂತಹ ಕನ್ನಡ ಕಟ್ಟಾಳು , ಸಾಹಿತಿ , ಮಕ್ಕಳ ಹಕ್ಕುಗಳ ಹೋರಾಟಗಾರ , ಪತ್ರಕರ್ತ , ಸಾಮಾಜಿಕ ಕಾರ್ಯಕರ್ತ ನಾಗರಾಜ ಕಿರಣಗಿ ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲೆಯ ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಕನ್ನಡ ಸೇವೆಗೆ ಅಣಿಯಾಗಿ  ಆಶೀರ್ವಾದಿಸಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಶಂಕರ್ ಗಂಗಣ್ಣವರ, ನಾರಾಯಣ ಭಜಂತ್ರಿ, ಬಸವರಾಜ್ ಕೊರವರ,  ಮಂಜುನಾಥ ಹೆಗಡೆ ಇದ್ದರು.


Spread the love

Leave a Reply

Your email address will not be published. Required fields are marked *

You may have missed