Posts Slider

ಕೋಟ್ಯಾಂತರ ವಂಚಿಸಿದವನ ಮಗನನ್ನೇ ಕಿಡ್ನ್ಯಾಪ್ ಮಾಡಿದ ದುರುಳರು ಅಂದರ್…!

1 min read
Spread the love

ಧಾರವಾಡ: ನೌಕರಿ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ವ್ಯಕ್ತಿಯ ಮಗನನ್ನ ಅಪಹರಣ ಮಾಡಿದ ಪ್ರಕರಣವನ್ನ ಕಂಡು ಹಿಡಿಯುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಪೊಲೀಸರು ಯಶಸ್ವಿಯಾಗಿದ್ದು, ಬೃಹತ್ ಜಾಲವೊಂದನ್ನ ಹೆಡಮುರಿಗೆ ಕಟ್ಟಲು ಅನುವಾಗಿದ್ದಾರೆ.

ವಿಜಯಪುರದ ಭಜಂತ್ರಿ ಎಂಬ ವ್ಯಕ್ತಿಯು ನೂರಾರೂ ಜನರಿಗೆ ನೌಕರಿ ಕೊಡಿಸುವುದಾಗಿ ವಂಚನೆ ಮಾಡಿದ್ದನೆಂದು ಹೇಳಲಾಗಿದೆ. ಆತನ ಸಂಬಂಧಿಕನಾದ ಉಮೇಶ ಭಜಂತ್ರಿ ಎಂಬಾತ, ಹಣಕ್ಕಾಗಿ ಆತನ ಮಗನನ್ನೇ ಅಪಹರಣ ಮಾಡಲು ಧಾರವಾಡ ಜಿಲ್ಲೆಯ ಕೆಲವರಿಗೆ ಸುಫಾರಿ ನೀಡಿದ್ದ ಪ್ರಕರಣವೀಗ ಬಯಲಾಗಿದೆ.

ನೌಕರಿ ಕೊಡಿಸುವುದಾಗಿ ಹೇಳಿದ್ದ ಭಜಂತ್ರಿ ಮಗ ಸನತ್ ನನ್ನ ಪೊಲೀಸರು ರಕ್ಷಣೆ ಮಾಡಿದ್ದು, ಪ್ರಮುಖ ಆರೋಪಿ ಉಮೇಶನನನ್ನೂ ಪೊಲೀಸರು ಬಂಧನ ಮಾಡಿದ್ದಾರೆ. ಆದರೆ, ಧಾರವಾಡ ಜಿಲ್ಲೆಯಲ್ಲಿ ಮಗುವಿನ ಅಪಹರಣಕ್ಕೆ ಸುಫಾರಿ ಪಡೆದು, ಮಗುವನ್ನ ಎಲ್ಲೆಂದರಲ್ಲಿ ಕರೆದುಕೊಂಡು ಅಲೆದಾಡಿದ್ದ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಹಾಗೂ ಧಾರವಾಡ ಉಪನಗರ ಠಾಣೆ ಪೊಲೀಸರು, ಮಹತ್ವವಾದ ಪ್ರಕರಣವನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed