Posts Slider

ಡಿಎಸ್ಪಿ ವಿಜಯ ಬಿರಾದಾರ ದಾಳಿ- ಮೂವರು ಗಾಂಜಿಗರ ಬಂಧನ- ಸಿಕ್ಕವರೆಂತವರು ಗೊತ್ತಾ…!

1 min read
Spread the love

ಧಾರವಾಡ: ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಗ್ರಾಮದಿಂದ ಚಳಮಟ್ಟಿಗೆ ಹೋಗುವ ರಸ್ತೆಯಲ್ಲಿ ಬೈಕಿನಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನ ಬಂಧನ ಮಾಡುವಲ್ಲಿ ಧಾರವಾಡ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನ ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಗ್ರಾಮದ ಸುಭಾಸ ಕಾಳಪ್ಪ ಕಾಳೋಜಿ, ಮಿರಜನ ಕೊಲ್ಹಾಪುರ ಚಾಳದ ಹೈದರಅಲಿ ಶಬ್ಬೀರ ಪಠಾಣ ಹಾಗೂ ಮಿರಜನ ಜೋಪಡಪಟ್ಟಿ ನಿವಾಸಿ ಖಾಲೀದ ರಿಯಾಜ್ ಮೋಮಿನ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ 75 ಸಾವಿರ ರೂಪಾಯಿ ಮೌಲ್ಯದ ಮೂರು ಕೆಜಿ 141 ಗ್ರಾಂ ಗಾಂಜಾ, 350 ರೂಪಾಯಿ ನಗದು, ಒಂದು ಬೈಕ್ ಹಾಗೂ ಮೂರು ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಡಿಎಸ್ಪಿ ವಿಜಯ ಬಿರಾದಾರ, ಎಎಸ್ಐ ವಿ.ಎಸ್.ಬೆಳಗಾಂವಕರ, ಆರ್.ಎಸ್.ಜಾಧವ, ಎಸ್.ಎಂ.ತಳಗೇರಿ, ಎಚ್.ಬಿ.ಐಹೋಳಿ, ಎ.ಎ.ಕಾಕರ, ಬಿ.ಎನ್.ಬಳಗಣ್ಣನವರ, ಆರ್.ಎನ್.ಕಮದೊಂಡ, ಪಿ.ಜಿ.ಪಾಟೀಲ, ಎ.ಎಂ.ನವಲೂರ, ಎಂ.ಜಿ.ಪಾಟೀಲ, ಆರ್.ಎ.ಕಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *

You may have missed