Posts Slider

ಕೈ-ಕಾಲು ಕಟ್ಟಿ “ಜೋತುಬಿಟ್ಟು” ಥಳಿಸಿದ ಪ್ರಕರಣ: ರಕ್ಕಸನ ಬಂಧನ…!

1 min read
Spread the love

ಧಾರವಾಡ: ಶಿವಗಂಗಾನಗರದಲ್ಲಿ ಕಾರ್ಮಿಕನ ಕೈಕಾಲು ಕಟ್ಟಿ ಹಿಗ್ಗಾ-ಮುಗ್ಗಾ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಧಾರವಾಡದ ಶಹರ ಠಾಣೆಯ ಪೊಲೀಸರು ಆರೋಪಿಯನ್ನ ಬಂಧನ ಮಾಡಿದ್ದಾರೆ.

ಶಿವಗಂಗಾನಗರದಲ್ಲಿನ ಕಟ್ಟಡವೊಂದರಲ್ಲಿ ಕೆಲಸ ಮಾಡಲು ಕರೆದುಕೊಂಡು ಬಂದಿದ್ದ ಮೃತ್ಯುಂಜಯ ಗುರುಪಾದಯ್ಯ ಗಂಗನಮಠ, ಕಾರ್ಮಿಕ ನಾಗರಾಜ ರಾಮಚಂದ್ರಪ್ಪ ಕಟಾರೆ ಎಂಬಾತನನ್ನ ಹಗ್ಗದಿಂದ ಕೈ ಕಾಲು ಕಟ್ಟಿ ಜೋತು ಬಿಟ್ಟು ಹಿಗ್ಗಾ-ಮುಗ್ಗಾ ಥಳಿಸಿದ್ದನು.

ಪ್ರಕರಣ ಹೊರಗೆ ಬಂದರೂ, ದೂರು ದಾಖಲು ಮಾಡಿಕೊಂಡು ಆರೋಪಿಯನ್ನ ಬಂಧನ ಮಾಡಬೇಕಾದ ಪೊಲೀಸರು, ರಾಜಕೀಯ ಫುಢಾರಿಯೊಬ್ಬನ ಮಾತಿಗೆ ಮರಳಾಗಿ ಸುಮ್ಮನಾಗಿದ್ದರು.

ಕರ್ನಾಟಕವಾಯ್ಸ್.ಕಾಂನಲ್ಲಿ ಮಾಹಿತಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಬಂಧನ ಮಾಡಿ, ಕಾನೂನು ಕ್ರಮವನ್ನ ಜರುಗಿಸಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾಗಿದ್ದ ನಾಗರಾಜ ಕಟಾರೆ ಕೂಡಾ, ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.

ಆರೋಪಿಯನ್ನ ಬಂಧನ ಮಾಡುವಲ್ಲಿ ಪಿಎಸ್ಐ ಸಂಗಮೇಶ, ಹವಾಲ್ದಾರ್ ಎಸ್.ಪಿ.ನರ್ತಿ, ಸಿಬ್ಬಂದಿಗಳಾದ ಮೌನೇಶ, ಪ್ರವೀಣ, ಬಿ.ಎ.ಜಾಧವ, ಕುರಿ ಸೇರಿದಂತೆ ಹಲವರು ಯಶಸ್ವಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed