Posts Slider

ಹುಬ್ಬಳ್ಳಿಯ ನಡು ರಸ್ತೆಯಲ್ಲಿ ಮಹಿಳೆ ದುರ್ಮರಣ…!

1 min read
Spread the love

ಹುಬ್ಬಳ್ಳಿ: ದ್ವಿಚಕ್ರವಾಹನದಲ್ಲಿ ಹಿಂದೆ ಕುಳಿತ ಮಹಿಳೆಯೋರ್ವಳು ಆಯತಪ್ಪಿ ಬಿದ್ದ ತಕ್ಷಣವೇ ಹಿಂದೆ ಬರುತ್ತಿದ್ದ ಟ್ರ್ಯಾಕ್ಟರವೊಂದು ಆಕೆಯ ಮೇಲೆ ಹಾಯ್ದ ಪರಿಣಾಮ ಸ್ಥಳದಲ್ಲಿ ಸಾವಿಗೀಡಾದ ಘಟನೆ ಹುಬ್ಬಳ್ಳಿಯ ಡಾ.ಆರ್.ಬಿ.ಪಾಟೀಲ ಆಸ್ಪತ್ರೆಯ ಮುಂಭಾಗ ಸಂಭವಿಸಿದೆ.

ಧಾರವಾಡದತ್ತ ಬೈಕಿನಲ್ಲಿ ಹೋಗುತ್ತಿದ್ದ ನಜಬೂನ್ ಎಂಬ ಮಹಿಳೆ ಸಾವಿಗೀಡಾಗಿದ್ದಾರೆ. ಮಹಿಳೆಯು ಹುಬ್ಬಳ್ಳಿಯ ನೂರಾನಿ ಪ್ಲಾಟ್ ನಿವಾಸಿಯಾಗಿದ್ದಾರೆ. ಮಣ್ಣು ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರಿನಿಂದ ದುರ್ಘಟನೆ ಸಂಭವಿಸಿದೆ.

ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ಶವವನ್ನ ಕಿಮ್ಸನ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಹುಬ್ಬಳ್ಳಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed