Posts Slider

ವಿದ್ಯಾಗಿರಿ ಪೊಲೀಸರಿಂದ ಇಬ್ಬರು “ದೋಚುಕೋರರ” ಬಂಧನ…!

1 min read
Spread the love

ಧಾರವಾಡ: ಸುವರ್ಣ ಪೆಟ್ರೋಲ್ ಬಂಕ್ ಬಳಿಯಲ್ಲಿ ಲಾರಿ ಚಾಲಕನಿಗೆ ಅಡ್ಡಗಟ್ಟಿ ಹಣ ಹಾಗೂ ಮೊಬೈಲ್ ದೋಚಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನ ಧಾರವಾಡ ಹಾವೇರಿಪೇಟೆ ಕಂಠಿ ಓಣಿಯ ಮಹ್ಮದ ಅಬ್ಬಾಸ್ ಅಬ್ದುಲಗನಿ ನಾಯ್ಕರ ಹಾಗೂ ಎಪಿಎಂಸಿ ಕಂಠಿಗಲ್ಲಿಯ ಮಹಮ್ಮದ್ ಆಸೀಫ್ ಜೈಲಾನಿ ಮುಲ್ಲಾ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದೂವರೆ ಲಕ್ಷ ಮೌಲ್ಯದ ಆಟೋರಿಕ್ಷಾ, ಹತ್ತು ಸಾವಿರ ಮೌಲ್ಯದ ಮೊಬೈಲ್ ಫೋನ್ ಹಾಗೂ 300 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.

ಎಸಿಪಿ ಜೆ.ಅನುಷಾ ಮಾರ್ಗದರ್ಶನದಲ್ಲಿ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಎಂ.ಕೆ.ಬಸಾಪೂರ, ಪಿಎಸ್ಐ ಸಚಿನಕುಮಾರ ದಾಸರೆಡ್ಡಿ, ಎಸ್.ಆರ್.ತೇಗೂರ. ಎಎಸ್ಐ ಬಿ.ಎಂ.ಅಂಗಡಿ, ಎ.ಬಿ.ನರೇಂದ್ರ, ಎಂ.ಎಫ್.ನದಾಫ, ಐ.ಜಿ.ಬುರ್ಜಿ, ಆರ್.ಕೆ.ಪತ್ತಾರ, ಎಂ.ಸಿ.ಮಂಕಣಿ, ಬಿ.ಎಂ.ಪಠಾತ, ಎಂ.ಜಿ.ಪಾಟೀಲ, ಬಸವರಾಜ ಸವಣೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿ ಚಾಲಕನಿಗೆ ಆಟೋದಲ್ಲಿ ಅಡ್ಡಗಟ್ಟಿ ಬಂದು ವಂಚನೆ ಮಾಡಿದರು. ಇಬ್ಬರು ಆರೋಪಿಗಳಿಂದ ಮೂರು ಪ್ರಕರಣಗಳು ಹೊರಬಂದಾಗಿವೆ.


Spread the love

Leave a Reply

Your email address will not be published. Required fields are marked *