Posts Slider

ನಮ್ಮ ಮುಂದ್ ಮಾಡಿದ್ರ್ ಬ್ಯಾರೇನ್ ಅಕೈತೀ ನೋಡ್ ಮತ್ತ್: ಮಹಿಳೆಯರಿಗೆ ಆವಾಜ್ ಹಾಕಿದ ಹವಾಲ್ದಾರ್ …!

1 min read
Spread the love

ಹುಬ್ಬಳ್ಳಿ: ನೀರಿನ ಕರದ ಬಾಕಿ ಹಣವನ್ನ ಮನ್ನಾ ಮಾಡುವಂತೆ ಕಾಂಗ್ರೆಸ್ ಪಕ್ಷದವರು ನಡೆಸುತ್ತಿದ್ದ ಹೋರಾಟದಲ್ಲಿ ಯೂನಿಫಾರ್ಮ್ ಹಾಕಿಕೊಳ್ಳದ ಹವಾಲ್ದಾರೋರ್ವರು ಮಹಿಳೆಯರಿಗೆ ಆವಾಜ್ ಹಾಕಿದ್ದ ಘಟನೆ ಶಾಸಕ ಅರವಿಂದ ಬೆಲ್ಲದ ಅವರ ನಿವಾಸದ ಬಳಿ ನಡೆದಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆಯುತ್ತಿದ್ದ ಹೋರಾಟದಲ್ಲಿ ಹಲವು ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು. ಆಗ ಬ್ಯಾರಿಕೇಡಿನ ಬಳಿ ನಿಂತಿದ್ದ ಹೊನ್ನಪ್ಪನವರ ಎಂಬ ಗೋಕುಲ ಠಾಣೆಯ ಹವಾಲ್ದಾರ ಯೂನಿಫಾರ್ಮ್ ಇಲ್ಲದೇ, ಕೂಲಿಂಗ್ ಗ್ಲಾಸ್ ನ್ನ ಹೀರೋಗಳ ಹಾಗೇ ತಲೆಗೆ ಏರಿಸಿಕೊಂಡು ಮಹಿಳೆಯರಿಗೆ ಏಕ ವಚನದಲ್ಲಿ ಮಾತನಾಡಿದ್ದನ್ನ, ಪ್ರಶ್ನಿಸಿದ ಮಹಿಳಾ ಕಾರ್ಯಕರ್ತರಿಗೆ ಮತ್ತೆ ಆವಾಜ್ ಹಾಕಿದರು.

ಹೊನ್ನಪ್ಪನವರ ಪೊಲೀಸ್ ಇಲಾಖೆಯಲ್ಲಿ ನೀತಿ ನಿಯಮಗಳನ್ನ ಗಾಳಿಗೆ ತೂರಿ, ಮಹಿಳೆಯರಿಗೆ ಮಾತನಾಡುವುದನ್ನ ಕಲಿಯದೇ ಇರುವುದು ಸ್ಥಳದಲ್ಲಿ ಗೋಚರವಾಗುತ್ತಿತ್ತು. ಇದೇ ಕಾರಣಕ್ಕೆ ಕೆಲವು ಮಹಿಳಾ ಕಾರ್ಯಕರ್ತರು ಮತ್ತಷ್ಟು ಆಕ್ರೋಶವ್ಯಕತಪಡಿಸಿದರು.

ಗೋಕುಲ ಪೊಲೀಸ್ ಠಾಣೆಯಲ್ಲಿ ಹೊನ್ನಪ್ಪನವರ ಎಂಬ ಹವಾಲ್ದಾರೊಬ್ಬರು, ಹೀಗೆ ಸಾರ್ವಜನಿಕ ಸ್ಥಳದಲ್ಲಿ ವರ್ತಿಸುವುದನ್ನ ಹಿರಿಯ ಅಧಿಕಾರಿಗಳು ನೋಡಬೇಕಿದೆ. ಅವರೊಬ್ಬರ ಜನರಿಗಾಗಿ ಇರುವ ಸಿಬ್ಬಂದಿ ಎನ್ನುವುದನ್ನ ತಿಳುವಳಿಕೆ ಕೊಡಬೇಕಿದೆ. ಇಲ್ಲದಿದ್ದರೇ, ಅವರ ‘ನನ್ನ ಮುಂದ್ …..


Spread the love

Leave a Reply

Your email address will not be published. Required fields are marked *