Posts Slider

ತಾಯಿಯ ಸಮ್ಮುಖದಲ್ಲಿ “ಲೋಹದ ಮನುಷ್ಯ”ನಾದ ಮುರುಗೇಶ ಚೆನ್ನಣ್ಣನವರ…!

1 min read
Spread the love

ಓಡಿಸ್ಸಾ: ನಾನು ಒಮ್ಮೆ ಐರನ್ ಮ್ಯಾನ್ ಆಗಬೇಕು. ಇಷ್ಟು ದಿನ ಪಟ್ಟಿದ ಪ್ರಯತ್ನಕ್ಕೆ ಅದೊಂದು ಮೆಟ್ಟಿಲು ಬಾಕಿಯಿದೆ ಎನ್ನುತ್ತಲೇ ಕಠಿಣವಾದ ತರಬೇತಿಯನ್ನ ಪಡೆಯುತ್ತಲೇ ತಮ್ಮ ಸಾಧನೆಯನ್ನ ಸಾಧಿಸಿದ್ದು, ಹೆಸ್ಕಾಂನ ಜಾಗೃತದಳದ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ..!

PI Murugesh Chennannavar and his Mother Gouramma

ಹೌದು.. ಪೊಲೀಸ್ ಇಲಾಖೆಯಲ್ಲಿ ಮುರುಗೇಶ ಚೆನ್ನಣ್ಣನವರದ್ದು ಅಪರೂಪದ ವ್ಯಕ್ತಿತ್ವ. ಎಲ್ಲರದ್ದೂ ಒಂದು ದಾರಿಯಾದರೇ, ಆ ದಾರಿಯ ಜೊತೆಗೆ ಸಾಧನೆಯ ದಾರಿಯನ್ನ ರೂಪಿಸಿಕೊಂಡಿದ್ದು ಮಾತ್ರ ಇವರೊಬ್ಬರೇ. ಅದೇ ಕಾರಣಕ್ಕೆ ಎಲ್ಲ ಇನ್ಸಪೆಕ್ಟರುಗಳಿಗೂ ಭಿನ್ನವಾಗಿ ರೂಪಿತಗೊಂಡಿದ್ದು, ಮುರುಗೇಶ ಚೆನ್ನಣ್ಣನವರ.

ನಿನ್ನೆ ಓರಿಸ್ಸಾದ ಕೋನಾರ್ಕದಲ್ಲಿ ಫುಲ್ ಐರನ್ ಮ್ಯಾನ್ ಟಾಸ್ಕನ್ನ ಮುಗಿಸಿದ್ದಾರೆ. ನಾಲ್ಕು ಕಿಲೋಮೀಟರ್ ಈಜು, 180 ಕಿಲೋಮೀಟರ್ ಸೈಕಲಿಂಗ್ ಮತ್ತು 42.2 ಕಿಲೋಮೀಟರ್ ರನ್ನಿಂಗನ್ನ 16 ಗಂಟೆ 45 ನಿಮಿಷದಲ್ಲಿ ಮುಗಿಸಿ, ರಾಜ್ಯದ ಪೊಲೀಸ್ ಇತಿಹಾಸದಲ್ಲಿ ಮಹತ್ವವಾದ ಸಾಧನೆಯನ್ನ ಮಾಡಿ ಬಂದಿದ್ದಾರೆ.

ಬೆಳಿಗ್ಗೆ ಏಳು ಗಂಟೆಗೆ ಆರಂಭವಾಗಿದ್ದ ಟಾಸ್ಕ್ ನ್ನ ರಾತ್ರಿ 11ರೊಳಗೆ ಮಾಡಿ ಮುಗಿಸಿದ್ದಾರೆ. ಲಖನೌ ಟುಬೋನಾ ಸ್ಪೋರ್ಟ್ಸ್ ಅಸೋಸಿಯೇಷನ್ ಓಡಿಸ್ಸಾ ಟೂರಿಸಂ ಡಿಪಾರ್ಟಮೆಂಟ್ ಹಾಗೂ ಐಟಿಎಫ್ ಇಂಡಿಯನ್ ತ್ರಿಯಾಥ್ಲಾನ್ ಅಸೋಸಿಯೇಷನ್ ಅಡಿಯಲ್ಲಿ ಐರನ್ ಮ್ಯಾನ್ ನಡೆದಿತ್ತು.

ಗ್ರಾಮೀಣ ಪ್ರದೇಶದಿಂದ ಬಂದಿರುವ ಮುರಗೇಶ ಚೆನ್ನಣ್ಣನವರ ತಾಯಿ ಗೌರಮ್ಮರನ್ನ ಓಡಿಸ್ಸಾಗೆ ಕರೆದುಕೊಂಡು ಹೋಗಿ, “ಲೋಹದ ಮನುಷ್ಯ”ನಾದ ನಂತರ ಆ ಪ್ರಶಸ್ತಿಯನ್ನ ತಾಯಿಗೆ ಅರ್ಪಣೆ ಮಾಡಿದ್ದಾರೆ. ಮಗನ ಸಾಧನೆಯನ್ನ ತಾಯಿ ಗೌರಮ್ಮನವರು ಕಣ್ಣು ತುಂಬ ತುಂಬಿಕೊಂಡು, ಬಂದಿರುವುದು ಹೆಮ್ಮೆಯ ವಿಷಯವಾಗಿದೆ.

ಕಂಗ್ರಾಟ್ಸ್ ಮುರುಗೇಶ ಚೆನ್ನಣ್ಣನವರ ಸರ್…!


Spread the love

Leave a Reply

Your email address will not be published. Required fields are marked *