Posts Slider

ಶಿವಾಜಿ ಜಯಂತಿಯಂದು ಹೆಬಸೂರು ಗ್ರಾಮದ ಯುವಕರು ಮಾಡಿದ್ದೇನು…!?

1 min read
Spread the love

ಹುಬ್ಬಳ್ಳಿ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದ ಯುವಕರು ವಿಶೇಷ ಕಾರ್ಯಕ್ರಮವೊಂದನ್ನ ಹಮ್ಮಿಕೊಂಡಿದ್ದರು.

Hebsur govt school

ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಸಿ.ಆರ್.ಸಿ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಛತ್ರಪತಿ ಶಿವಾಜಿ ಜಯಂತ್ಯೋತ್ಸವದ ಅಂಗವಾಗಿ ಶಾಲಾ ವಿದ್ಯ್ರಾರ್ಥಿಗಳಿಗೆ ಉಚಿತವಾಗಿ ಲೇಖನ ಸಾಮಗ್ರಿಗಳನ್ನು ಗ್ರಾಮದ ಯುವಕರು ವಿತರಿಸಿದರು.

ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ತಾಯಿ ಜೀಜಾಬಾಯಿ ಹೇಳಿದ ಕಥೆಗಳು ಅವರಿಗೆ ದಾರಿದೀಪವಾಯಿತು. ತಾಯಿ ಜೀಜಾಬಾಯಿ ಹೇಳಿದಂತೆ ಸರ್ವ ಮಹಿಳೆಯರನ್ನು ಗೌರವಿಸಿದ್ದು ಅವರ ಅಭ್ಯುದಯಕ್ಕೆ ಆಧ್ಯತೆ ನೀಡಿದ್ದು ಇಂದಿಗೂ ಪ್ರಸ್ತುತ. ಅವರ ಜೀವನ ಚರಿತ್ರೆ ತಿಳಿಯಬೇಕು ಎಂದು ಸದಾನಂದ ಕಲಾಲ, ಮಹಾಂತೇಶ ಹೂಗಾರ, ಸುನಿಲ, ಪಾರ್ವತಿ, ಪ್ರವೀಣ ಜವಳಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು.

ವೀರೇಶ ದಾಡಿಬಾವಿ, ಪ್ರವೀಣ ಯಂಕಂಚಿ, ಆಕಾಶ ಹಿರೇಮಠ, ಅಯ್ಯಪ್ಪ ಹರ್ಲಾಪುರ,  ರಾಘವೇಂದ್ರ ಹೂಗಾರ, ಉಪಸ್ಥಿತರಿದ್ದರು. ಪ್ರ.ಗು.ಎಸ್.ಎಲ್.ಬೆಟಗೇರಿ ಅಧ್ಯಕ್ಷತೆವಹಿಸಿದ್ದರು. ಗುರುಗಳು ಗುರು ಮಾತೆಯರು ಉಪಸ್ಥಿತರಿದ್ದರು. ಅಶೋಕ.ಎಮ್.ಸಜ್ಜನ.ಸ್ವಾಗತಿಸಿದರು. ದೇವೇಂದ್ರ ಪತ್ತಾರ ನಿರೂಪಿಸಿದರು.


Spread the love

Leave a Reply

Your email address will not be published. Required fields are marked *