Posts Slider

ಬಿಜೆಪಿ ನಾಯಕನ ಕುಟುಂಬದ ನಾಲ್ವರ ಆತ್ಮಹತ್ಯೆ…!

1 min read
Spread the love

ರಾಜಸ್ಥಾನ:  ಬಿಜೆಪಿ ಮಾಜಿ ಅಧ್ಯಕ್ಷ ದಿವಂಗತ ಮದನ್ ಲಾಲ್ ಸೈನಿ ಅವರ ಕುಟುಂಬದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಸಹೋದರನ ಮಗ, ಪತ್ನಿ ಹಾಗೂ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಕಾರ್ ಜಿಲ್ಲೆಯಲ್ಲಿ ನಡೆದ ಈ ಘಟನೆಯು ಆತಂಕವನ್ನು ಉಂಟುಮಾಡುತ್ತಿದೆ.  

file photos

ಹನುಮಪ್ರಸಾದ್, ಪತ್ನಿ ತಾರಾ ಮತ್ತು ಇಬ್ಬರು ಪುತ್ರಿಯರಾದ ಅಂಜು ಮತ್ತು ಪೂಜಾ ಆತ್ಮಹತ್ಯೆ ಮಾಡಿಕೊಂಡವರು. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಹನುಮಂತಪ್ರಸಾದ್ ಅವರ ಹಿರಿಯ ಮಗ (17) ಮೃತಪಟ್ಟಿದ್ದರು. ಅಂದಿನಿಂದ ಅವರು ತೀವ್ರ ವಾದ ಭಾವನಾತ್ಮಕ ಸಂಕಟದಲ್ಲಿ ಸಿಲುಕಿದ್ದರು.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಎಸ್ ಪಿ ಕುನ್ವರ್ ರಾಷ್ಟದೀಪ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಸಿಕಾರ್ ನ ಶ್ರೀ ಕಲ್ಯಾಣ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನಾ ಸ್ಥಳದಲ್ಲಿ ಪೊಲೀಸರು  ಸೂಸೈಡ್ ನೋಟ್ ವಶಪಡಿಸಿಕೊಂಡಿದ್ದಾರೆ. ಮಗನಿಲ್ಲದೆ ಬದುಕುವುದು ಕಷ್ಟ ಎಂದು ವಿವರಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಬರೆದಿದ್ದಾರೆ. ಸಿಕಾರ್ ಸರ್ಕಲ್ ಇನ್ಸ್ ಪೆಕ್ಟರ್ ವಿರೇಂದ್ರ ಶರ್ಮಾ ಮಾತನಾಡಿ, ಗ್ರಾಮದ ಪೂಜಾರಿ, ಹನುಮಾನ್ ಪ್ರಸಾದ್ ಅವರ ಕುಟುಂಬದ ಆತ್ಮಹತ್ಯೆ ಬಗ್ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದಾಗ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.  ಗಂಡು ಮಗ ಮೃತಪಟ್ಟ ನಂತರ ಅವರೆಲ್ಲರೂ ಮಾನಸಿಕ ಒತ್ತಡಕ್ಕೆ ಸಿಲುಕಿದ್ದು, ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಹೇಳಿದರು.

ಹನುಮಾನ್ ಪ್ರಸಾದ್ ದಿವಂಗತ ಮದನ್ ಲಾಲ್ ಸೈನಿ ಅವರ ಸಹೋದರನ ಮಗ, ಮಾಜಿ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ಅವರು 2018ರ ಜೂನ್ ನಿಂದ ರಾಜಸ್ಥಾನ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಾರೋಗ್ಯದ ಕಾರಣ 2019ರ ಜೂನ್ ನಲ್ಲಿ ಅವರು ನಿಧನರಾಗಿದ್ದಾರೆ.


Spread the love

Leave a Reply

Your email address will not be published. Required fields are marked *