Posts Slider

ಆಕೆಯ ಕಿರುಕುಳದಿಂದ ಖ್ಯಾತ ನಟ ಆತ್ಮಹತ್ಯೆಗೆ ಶರಣು…!

1 min read
Spread the love

ಗೋರೆಗಾಂವ್​(ಮಹಾರಾಷ್ಟ್ರ): ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆ ಎಂಎಸ್ ಧೋನಿ; ದಿ ಅನ್​ಟೋಲ್ಡ್ ಸ್ಟೋರಿ ಹಾಗೂ ಅಕ್ಷಯ್​ ಕುಮಾರ್​ ಅವರೊಂದಿಗೆ ಕೇಸರಿ ಚಿತ್ರದಲ್ಲಿ ನಟನೆ ಮಾಡಿದ್ದ ನಟ ಸಂದೀಪ್ ನಹರ್​ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮುಂಬೈನ ಗೋರೆಗಾಂವ್​ನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅಲ್ಲಿನ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುಂಚೆ ಫೇಸ್​ಬುಕ್​ ಅಕೌಂಟ್​ನಲ್ಲಿ ವೀಡಿಯೋ ಶೇರ್ ಮಾಡಿರುವ ಅವರು, ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಧೋನಿ ಚಿತ್ರದಲ್ಲಿ ನಟನೆ ಮಾಡಿರುವ ಸುಶಾಂತ್ ಸಿಂಗ್​ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಡದಿಯ ಕಿರುಕುಳ ನೀಡುತ್ತಿರುವ ಬಗ್ಗೆ ಫೇಸ್ ಬುಕ್ ನಲ್ಲಿ ವಿವರವಾಗಿ ಹೇಳಿಕೆ ನೀಡಿದ್ದ ನಟ, ಕೆಲವೊತ್ತಿನ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ.


Spread the love

Leave a Reply

Your email address will not be published. Required fields are marked *