Posts Slider

ಬೆಟ್ಟಿಂಗ್ ಕುಳದ ಜೊತೆ ಎಣ್ಣೆ ಪಾರ್ಟಿ- ಸಿಸಿಬಿ ಪೊಲೀಸರ ಎತ್ತಂಗಡಿ..!

1 min read
Spread the love

ಮಂಗಳೂರು: ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯೊಂದಿಗೆ ಎಣ್ಣೆಪಾರ್ಟಿ ಮಾಡಿದ್ದ 8 ಜನ ಪೊಲೀಸ್ ಸಿಬ್ಬಂದಿಗಳನ್ನ ಸಿಸಿಬಿಯಿಂದ ವರ್ಗಾವಣೆ ಮಾಡಿ ಕಮೀಷನರ್ ಶಶಿಕುಮಾರ ಅವರು ಆದೇಶ ಹೊರಡಿಸಿದ್ದಾರೆ.

ಮಂಗಳೂರು ಸಮೀಪದ ಕುತ್ತಾರು ಬಳಿಯ ಬಾರ್ ವೊಂದರಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕುಳದೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದ ಸಿಸಿಬಿಯ ಮೂವರು ಎಎಸ್ಐ ಹಾಗೂ ಐವರು ಹವಾಲ್ದಾರಗಳನ್ನ ಪೊಲೀಸ್ ಕಮೀಷನರ್ ಶಶಿಕುಮಾರ ಎತ್ತಂಗಡಿ ಮಾಡಿದ್ದಾರೆ.

ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯ ಜೊತೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ವೇಳೆಯಲ್ಲಿ ಸಾರ್ವಜನಿಕರೋರ್ವರು ವೀಡಿಯೋ ಮಾಡಿ, ಅದನ್ನ ವೈರಲ್ ಮಾಡಿದ್ದರು. ಇದರಿಂದ ಪೊಲೀಸ್ ಇಲಾಖೆಗೆ ಸಾಕಷ್ಟು ಮುಜುಗರವುಂಟಾಗಿತ್ತು.

ಇದೇ ಕಾರಣಕ್ಕೆ ಸಿಸಿಬಿಯಲ್ಲಿದ್ದ 8 ಸಿಬ್ಬಂದಿಗಳನ್ನ ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡುವ ಮೂಲಕ ಕಮೀಷನರ್ ಶಶಿಕುಮಾರ, ಸಾರ್ವಜನಿಕರ ನಂಬಿಗೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ.


Spread the love

Leave a Reply

Your email address will not be published. Required fields are marked *