ಶ್ರೀರಾಮನ ಕಾಯ್ದ ಶಬರಿಯಂತಾದ ಯುವ ಕಾಂಗ್ರೆಸ್ ಕಾರ್ಯಕರ್ತರು..!
1 min read
ಬೆಂಗಳೂರು: ಯುವ ಕಾಂಗ್ರೆಸ್ ಚುನಾವಣೆ ಮುಗಿದು ಬರೋಬ್ಬರಿ 20 ದಿನಗಳಾದರೂ ಇನ್ನೂ ಫಲಿತಾಂಶ ಬಾರದೇ ಇರುವುದು ಉತ್ಸಾಹಿ ಯುವ ಸಮೂಹಕ್ಕೆ ನುಂಗಲಾರದ ತುತ್ತಾಗಿದೆ.
ಆ್ಯಪ್ ಮೂಲಕ ಜನೇವರಿ 12ರಂದು ಮತದಾನ ನಡೆದಿತ್ತು. ಅದಾದ ಐದು ದಿನದಲ್ಲಿ ರಿಸಲ್ಟ್ ಬರುತ್ತದೆ ಎಂದು ಹೇಳುತ್ತಲೇ ಇದ್ದಾರೆ ಹೊರತೂ ಇವತ್ತಿನವರೆಗೂ ಫಲಿತಾಂಶ ಬಾರದೇ ಇರುವುದು ಸೋಜಿಗ ಮೂಡಿಸಿದೆ.
ಈಗಾಗಲೇ ಬ್ಲಾಕ್ ಕಾಂಗ್ರೆಸ್ ಫಲಿತಾಂಶವನ್ನ ನೀಡಿದ್ದು, ಅದರಲ್ಲಿಯೂ ಧಾರವಾಡ ಗ್ರಾಮೀಣ ಮತ್ತು ಧಾರವಾಡ ಶಹರದ ಫಲಿತಾಂಶವಿನ್ನೂ ಪ್ರಕಟವಾಗಿಲ್ಲ. ನಿನ್ನೆ ಸಂಜೆಯವರೆಗೆ ಜಿಲ್ಲಾಧ್ಯಕ್ಷರ ಫಲಿತಾಂಶ ಬರುತ್ತದೆ ಎಂದು ಹೇಳಿ ಸಂದೇಶಗಳನ್ನೂ ಕಳಿಸಲಾಗಿತ್ತು. ಆದರೆ, ಯುವ ಕಾಂಗ್ರೆಸ್ಸಿಗರು ಕಾದಿದ್ದೇ ಬಂತು ಹೊರತಾಗಿ ಫಲಿತಾಂಶ ಮಾತ್ರ ಗೊತ್ತಾಗಿಲ್ಲ.
ಕಳೆದ ಎಂಟು ದಿನದಿಂದ ನಾಳೆ ಬಾ ಎಂಬ ಬೋರ್ಡ್ ತಗುಲಿಸಿದ ಹಾಗೇ ಆಗಿದ್ದು, ಶ್ರೀರಾಮನನ್ನ ಶಬರಿ ಆಗುವಂತೆ ಆಗಿದೆ. ಇವತ್ತಾದರೂ ಫಲಿತಾಂಶ ಬರುತ್ತಾ ಎಂದು ಕಾದು ನೋಡಬೇಕಿದೆ.