ಮೊಬೈಲ್ ಕೊಡದ ಪತಿ- ಪತ್ನಿಗಾಗಿ ನಾಯಿ ಸಾಕಿದ್ದ: ಆದರೂ ಆಕೆ..
1 min read
ಹುಬ್ಬಳ್ಳಿ: ಮದುವೆಯಾಗಿ ಬರೋಬ್ಬರಿ ಏಳು ವರ್ಷವಾದರೂ ಮೊಬೈಲ್ ಕೊಡಿಸದೇ ಇದ್ದ ಪತಿಯನ್ನ ತೊರೆದು ಹೆಂಡತಿ ನಾಪತ್ತೆಯಾಗಿದ್ದು, ಎರಡು ಮಕ್ಕಳು ಅನಾಥರಾದ ಪ್ರಕರಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.
ಬೆಂಗಳೂರು ಬಳಿಯಿರುವ ರಾಮನಗರ ನಿವಾಸಿ ಬಿ.ವೆಂಕಟೇಶ ಹೈದ್ರಾಬಾದ್ ಮೂಲದ ಶೃತಿಯನ್ನ ಕಳೆದ ಏಳು ವರ್ಷದ ಹಿಂದೆ ಮದುವೆಯಾಗಿದ್ದ. ತಾರಿಹಾಳ ಕೈಗಾರಿಕಾ ಪ್ರದೇಶದ ಪ್ಯಾಕ್ಟರಿಯಲ್ಲಿ ಕೆಲಸ ಸಿಕ್ಕಿದ್ದರಿಂದ ಇಲ್ಲಿಯೇ ಮನೆ ಮಾಡಿಕೊಂಡಿದ್ದ. ಹೊರವಲಯದಲ್ಲಿ ಮನೆಯನ್ನೂ ಕಟ್ಟಿದ್ದರಿಂದ, ಯಾರೂ ಬರಬಾರದೆಂದು ನಾಯಿಯೊಂದು ಪತಿ ಸಾಕಿದ್ದ.
ತನ್ನ ನೌಕರಿ ಮುಗಿಸಿಕೊಂಡು ಬಂದು ಮೊಬೈಲ್ ಮೂಲಕ ಯಾರಾದರೂ ಜೊತೆ ಹೆಂಡತಿ ಮಾತನಾಡುತ್ತೇನೆ ಎಂದರೇ ಮೊಬೈಲ್ ಕೊಡುತ್ತಿದ್ದ. ಇವೇ ಕಾರಣಗಳಿಂದ ರೋಸಿ ಹೋಗಿರುವ ಪತ್ನಿ ಶೃತಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದು, ಪ್ರಕರಣವೀಗ ಗ್ರಾಮೀಣ ಠಾಣೆಯ ಮೆಟ್ಟಿಲೇರಿದೆ.
6 ಮತ್ತು 3 ವರ್ಷದ ಎರಡು ಮಕ್ಕಳಿಗೆ ಪುಸ್ತಕ ತರುತ್ತೇನೆ ಎಂದು ಮನೆಬಿಟ್ಟು ಹೋದವಳು, ಬಾರದೇ ಇರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಶೃತಿ ಬಳಿ ಮೊಬೈಲ್ ಇಲ್ಲದೇ ಇರುವುದು ಕೂಡಾ, ಪೊಲೀಸರ ಹುಡುಕಾಟಕ್ಕೆ ತೊಂದರೆಯಾಗಿದೆ.