ರಜತ-ಸುಶ್ಮಿತಾ ವೆಡ್ಡಿಂಗ್: ಸೋನಿಯಾ ಗಾಂಧಿಗೂ ಆಮಂತ್ರಣ
1 min read
ಗೋವಾ: ಡಿಸೆಂಬರ್ 18ರಂದು ನಡೆಯಲಿರುವ ಕಾಂಗ್ರೆಸ್ ಮುಖಂಡರಾಗಿದ್ದ ದಿವಂಗತ ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಅವರ ಪುತ್ರನನ ವಿವಾಹಕ್ಕೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಗೂ ಆಮಂತ್ರಣ ನೀಡಲಾಗಿದೆ.
ಇಂದು ಬೆಳಗಿನ ಜಾವ ಕುಟುಂಬದವರೊಂದಿಗೆ ಕಳೆದ ಒಂದು ವಾರದಿಂದ ಗೋವಾದಲ್ಲಿರುವ ಸೋನಿಯಾ ಕುಟುಂಬಕ್ಕೆ ಇಂದು ಭೇಟಿ ನೀಡಿದ ರಜತ ಉಳ್ಳಾಗಡ್ಡಿಮಠ ಅವರ ತಾಯಿ ಸುನೀತಾ, ಮದುವೆಗೆ ಆಹ್ವಾನ ನೀಡಿದ್ರು.
ಇದೇ ಸಮಯದಲ್ಲಿ ಸೋನಿಯಾ ಗಾಂಧಿಯವರು ಸೈಕಲ್ ಚಲಾಯಿಸುತ್ತಿದ್ದನ್ನ ಸ್ವತಃ ರಜತ ಶೂಟ್ ಮಾಡಿದ್ದು, ಅದೀಗ ಎಲ್ಲೆಡೆಯೂ ವೈರಲ್ ಆಗಿದೆ. ಮದುವೆಯ ಆಹ್ವಾನ ಪಡೆದಿರುವ ಸೋನಿಯಾಗಾಂಧಿಯವರು, ರಜತಗೆ ಶುಭಾಶಯ ತಿಳಿಸಿ, ಆರತಕ್ಷತೆಗೆ ಬರುವುದಾಗಿ ಹೇಳಿದ್ದಾರಂತೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಪುತ್ರಿ ಸುಶ್ಮಿತಾ ಜೊತೆ ರಜತ ಮದುವೆ ಡಿಸೆಂಬರ್ 18ರಂದು ಬೆಳಗಾವಿಯ ಖಾಸಗಿ ಹೊಟೇಲನಲ್ಲಿ ನಡೆಯಲಿದೆ. ಈ ಸಂಬಂಧ ರಾಜ್ಯದ ಬಹುತೇಕ ಕಾಂಗ್ರೆಸ್ ಮುಖಂಡರಿಗೆ ಆಹ್ವಾನ ನೀಡಲಾಗಿದೆ.