ಮೂರು ದಿನ ಸಿಬಿಐ ಕಸ್ಟಡಿಗೆ ಮಾಜಿ ಸಚಿವ ವಿನಯ ಕುಲಕರ್ಣಿ
1 min read
ಮೂರು ದಿನ ಸಿಬಿಐ ಕಸ್ಟಡಿಗೆ ಮಾಜಿ ಸಚಿವ ವಿನಯ ಕುಲಕರ್ಣಿ ನವೆಂಬರ್ 9 ರಂದು ಬೆಳಿಗ್ಗೆ 11 ಕ್ಕೆ ಹಾಜರುಪಡಿಸಬೇಕೆಂದು ನ್ಯಾಯಾಧೀಶೆ ಪಂಚಾಕ್ಷರಿ ಮಹೇಶ್ವರಿ ಆದೇಶ ನೀಡಿದ್ದಾರೆ.
ಧಾರವಾಡ: ಯೋಗೇಶಗೌಡ ಗೌಡರ ಹತ್ಯೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನ ಮೂರು ದಿನದ ವರೆಗೆ ಸಿಬಿಐ ಕಸ್ಟಡಿ ಪಡೆದಿದ್ದು, ನವೆಂಬರ್ 9ಕ್ಕೆ ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲು ಆದೇಶ ನೀಡಲಾಗಿದೆ.
ಧಾರವಾಡ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ತೀರ್ಪು ನೀಡಿದ್ದು, ಮೂರು ದಿನ ಸಿಬಿಐ ಕಸ್ಟಡಿಗೆ ವಿನಯ ಕುಲಕರ್ಣಿಯವರನ್ನ ನೀಡಲಾಗಿದೆ. ಮಾಜಿ ಸಚಿವ ವಿನಯ ಕುಲಕರ್ಣಿ ಕಸ್ಟಡಿ ಸಂಬಂಧಿತ ಅರ್ಜಿಯ ತೀರ್ಪುನ್ನ ನೀಡಲಾಗಿದೆ.
ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಹೆಚ್ಚಿನ ತನಿಖೆ ನನಡೆಸಲು ಕಸ್ಟಡಿಗೆ ಪಡೆಯಲು ಸಿಬಿಐ ಅರ್ಜಿ ಸಲ್ಲಿಸಿತ್ತು. ಸಿಬಿಐ ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಿದ್ದ ವಿನಯ ಪರ ವಕೀಲರು. ಬೆಳಗ್ಗೆ ವಾದ ವಿವಾದ ಆಲಿಸಿದ್ದ ನ್ಯಾಯಾಲಯ. ವಾದ ವಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಧೀಶರು.
ಇದೀಗ ಮೂರು ದಿನಗಳವರೆಗೆ ಸಚಿವ ವಿನಯ ಕುಲಕರ್ಣಿ ಅವರನ್ನ ಸಿಬಿಐ ಕಸ್ಟಡಿಗೆ ನೀಡಿದ್ದು, ಮೂರು ದಿನದ ನಂತರ ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.