ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ಸಲ್ಲಿಕೆ- ನಾಳೆ ವಿಚಾರಣೆ ಸಾಧ್ಯತೆ
1 min read
ಧಾರವಾಡ: ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ಜಾಮೀನಿಗಾಗಿ ಹೊಸದೊಂದು ಅರ್ಜಿಯನ್ನ ಸಲ್ಲಿಸಲಾಗಿದ್ದು, ನಾಳೆ ನ್ಯಾಯಾಲಯದ ಮುಂದೆ ಬರುವ ಸಾಧ್ಯತೆಯಿದೆ.
ನವೆಂಬರ್ 5ರಂದು ಸಿಬಿಐನಿಂದ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ಜಾಮೀನು ಅರ್ಜಿಯನ್ನ ಈ ಹಿಂದೆ ಸಲ್ಲಿಸಲಾಗಿತ್ತಾದರೂ, ಕೊನೆ ಸಮಯದಲ್ಲಿ ಅದನ್ನ ಮರಳಿ ಪಡೆಯಲಾಗಿತ್ತು.
ಕಳೆದ 23ರಂದು 14ದಿನದ ನ್ಯಾಯಾಂಗ ಬಂಧನ ಮುಗಿದ ಮೇಲೆ ಮತ್ತೆ 14ದಿನದ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದ ನಾಲ್ಕು ದಿನದ ನಂತರ ಮತ್ತೆ ಜಾಮೀನಿಗಾಗಿ ಅರ್ಜಿಯನ್ನ ಸಲ್ಲಿಸಿದ್ದು, ನಾಳೆ ಈ ಬಗ್ಗೆ ನ್ಯಾಯಾಲಯದ ಮುಂದೆ ಬರಲಿದೆ.
ಜಾಮೀನು ಅರ್ಜಿಯು ನ್ಯಾಯಾಲಯದ ಮುಂದೆ ಬಂದರೇ, ನ್ಯಾಯಾಲಯ ಮತ್ತೆ ದಿನಾಂಕವನ್ನ ನಿಗದಿ ಮಾಡಿ, ಈ ಬಗ್ಗೆ ಸಿಬಿಐಗೆ ನೋಟೀಸ್ ಜಾರಿ ಮಾಡಲಿದೆ. ಆಗ, ಸಿಬಿಐ ತನ್ನ ತಕರಾರನ್ನ ಸಲ್ಲಿಸುವ ಜೊತೆಗೆ ತನ್ನ ವಾದವನ್ನೂ ತಿಳಿಸಬಹುದಾಗಿದೆ.