Posts Slider

Karnataka Voice

Latest Kannada News

ಧಾರವಾಡದ ವಿಲಾಸ ನಾಂದೋಡಕರಗೆ ಡಾಕ್ಟರೇಟ್…

1 min read
Spread the love

ಧಾರವಾಡ: ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತ ವಿಲಾಸ ವಸಂತರಾವ್ ನಾಂದೋಡಕರ ಅವರು  ಸಾದರಪಡಿಸಿದ “ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ಪತ್ರಕರ್ತರು : ಒಂದು ಅಧ್ಯಯನ” ಕುರಿತ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ವಿಲಾಸ್ ನಾಂದೋಡಕರ ಅವರಿಗೆ  ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಂಜಯಕುಮಾರ ಮಾಲಗತ್ತಿ ಮಾರ್ಗದರ್ಶನ ನೀಡಿದ್ದಾರೆ.

ಕಳೆದ ಎರಡು ದಶಕಗಳ ಕಾಲ ವಿದ್ಯುನ್ಮಾನ ಮಾಧ್ಯಮದಲ್ಲಿ ವಿವಿಧ ಸುದ್ದಿವಾಹಿನಿಗಳಲ್ಲಿ ಪ್ರಮುಖ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿ, ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರ ನೈಜ ಸ್ಥಿತಿಗತಿ, ವೃತ್ತಿಪರತೆ, ಸಾಮಾಜಿಕ ಸ್ಥಿರತೆ, ಶೈಕ್ಷಣಿಕ ಹಿನ್ನೆಲೆ, ತಾಂತ್ರಿಕ ಕೌಶಲ್ಯತೆ ಸೇರಿದಂತೆ ಹಲವಾರು ಪ್ರಮುಖ ಅಂಶಗಳ ಮೇಲೆ ವಿಲಾಸ ನಾಂದೋಡಕರ ತಮ್ಮ ಸಂಶೋಧನಾ ಪ್ರಬಂಧದಲ್ಲಿ ದಾಖಲಿಸಿದ್ದಾರೆ.


Spread the love

Leave a Reply

Your email address will not be published. Required fields are marked *