ಭೀಮಾತೀರದ ಶೂಟೌಟ್ ಪ್ರಕರಣ: ಮತ್ತೇ ನಾಲ್ವರು ಬಂಧನ
1 min read
ವಿಜಯಪುರ: ಭೀಮಾತೀರದ ಹಂತಕ ಮಹಾದೇವ ಸಾಹುಕಾರ್ ಹತ್ಯೆ ಯತ್ನಿಸಿದ ಮತ್ತೇ ನಾಲ್ವರನ್ನು ವಿಜಯಪುರ ಗ್ರಾಮೀಣ ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 11ಕ್ಕೇರಿದೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಾಳ ಕ್ರಾಸ್ ಹತ್ತಿರ ನಡೆದ ಕೊಲೆ ಪ್ರಕರಣದಲ್ಲಿ 301/2020 ಕಲಂ 143, 147, 148, 109, 324, 307, 302, ಸಕ 149 ಐಪಿಸಿ ಮತ್ತು 25 ಇಂಡಿಯನ್ ಆರ್ಮ್ಸ್ ಆ್ಯಕ್ಸ್, ನೇದ್ದರ ಅಡಿ ಪ್ರಕರಣ ದಾಖಲಾಗಿದ್ದು, ಇನ್ನು ವಿಜಯಪುರ ರಾಜರತ್ನ ನಿವಾಸಿ ಕಾಶೀನಾಥ ಭೀಮಪ್ಪ ತಾಳಿಕೋಟಿ, ಸಾರವಾಡ ನಿವಾಸಿ ಯುನುಸ್ ಅಲಿ ಹುಸೇನಸಾಬ ಮುಜಾವರ, ವಿಜಯಪುರ ಬಂಬಳ ಅಗಸಿ ನಿವಾಸಿ ರಾಜಅಹ್ಮದ ರಜಾಕಸಾಬ ಗುನ್ನಾಪುರ, ವಿಜಯಪುರ ಯೋಗಾಪುರ ನಿವಾಸಿ ಸಿದ್ದು ಗುರುಪಾದಪ್ಪ ಮೂಡಂಗಿ ಬಂಧಿತ ಆರೋಪಿಗಳು.
ಅಲ್ಲದೇ, ಬಂಧಿತ ಆರೋಪಿತಗಳಿಂದ ಕೃತ್ಯಕ್ಕೆ ಬಳಸಿದ ಒಂದು ಮಚ್ಚು, ಎರಡು ಮೊಬೈಲ್‌ಗಳು ಹಾಗು ಎರಡು ಮೋಟಾರ ಸೈಕಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.