ಮತ್ತೆ ಶುರುವಾಗತ್ತಾ ವಿದ್ಯಾಗಮ- ಸಾಧನೆ, ಕೊರತೆ ಪಟ್ಟಿ ಮಾಡಲು ಆದೇಶ
1 min read
ಬೆಂಗಳೂರು: ದೇಶದ ಯಾವುದೇ ಭಾಗದಲ್ಲಿ ಆರಂಭವಾಗದ ವಿದ್ಯಾಗಮ ಕಾರ್ಯಕ್ರಮವನ್ನ ರಾಜ್ಯದಲ್ಲಿ ಆರಂಭಿಸಲಾಗಿತ್ತು. ಇದರಿಂದ ಕೆಲವು ಆವಾಂತರಗಳು ನಡೆದವು ಎಂಬ ದೂರುಗಳ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆಯನ್ನ ತಾತ್ಕಾಲಿಕವಾಗಿ ಬಂದ್ ಮಾಡಿರುವುದು ಶಿಕ್ಷಕ ವಲಯದಲ್ಲಿ ಗೊತ್ತಿರುವ ವಿಚಾರವೇ ಆಗಿದೆ.
ಇದೀಗ ಸರಕಾರ ಹೊಸದೊಂದು ಆದೇಶ ಹೊರಡಿಸಿದ್ದು, ನವೆಂಬರ್ 2ರಿಂದ ಕಡ್ಡಾಯವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಶಾಲೆಗಳಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಿದೆ.
ಈ ಆದೇಶದ ಜೊತೆಗೆ ವಿದ್ಯಾಗಮ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳ ಪ್ರಗತಿಯನ್ನ ವಿಶ್ಲೇಷಣೆ ಮಾಡಿ, ಪ್ರತಿ ವಿದ್ಯಾರ್ಥಿಗಳ ಸಾಧನೆಯನ್ನು ಮತ್ತು ಕೊರತೆಯನ್ನ ಪಟ್ಟಿ ಮಾಡುವಂತೆ ಶಿಕ್ಷಕರಿಗೆ ಆದೇಶ ನೀಡಲಾಗಿದೆ.
ವಿದ್ಯಾಗಮ ಕಾರ್ಯಕ್ರಮ ಬಡ ಮಕ್ಕಳಿಗೆ ಮತ್ತು ಕೂಲಿ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಿತ್ತು. ಯಾವುದೇ ಥರದ ಚಟಗಳಿಗೆ ಮಕ್ಕಳು ಬಲಿಯಾಗಲಾರರು ಎಂಬ ಅಭಿಲಾಷೆಯನ್ನ ಸರಕಾರ ಹೊಂದಿ, ವಿದ್ಯಾಗಮ ಕಾರ್ಯಕ್ರಮವನ್ನ ಅನುಷ್ಟಾನಕ್ಕೆ ತಂದಿತ್ತು.
ಸರಕಾರ ಈ ಕಾರ್ಯಕ್ರಮದಿಂದಲೇ ಹಲವು ಶಿಕ್ಷಕರು ಕೊರೋನಾಗೆ ಬಲಿಯಾದ ನಂತರ ಶಿಕ್ಷಕ ವಲಯ ವಿದ್ಯಾಗಮದಿಂದ ಭಯಬೀತರಾದರು. ಹಾಗಾಗಿಯೇ ಸರಕಾರ ಕಾರ್ಯಕ್ರಮವನ್ನ ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಈಗ ವಿಶ್ಲೇಷಣೆ ಪಡೆದು ಮತ್ತೆ ಆರಂಭ ಮಾಡುವುದಕ್ಕೆ ಸರಕಾರ ಮುಂದಾಗತ್ತಾ ಎಂಬುದು ಶಿಕ್ಷಕರ ಮುಂದಿರುವ ಪ್ರಶ್ನೆ.