Posts Slider

Karnataka Voice

Latest Kannada News

ವಿದ್ಯಾಗಮ ಕಾರ್ಯಕ್ರಮ ಉದ್ಘಾಟನೆ ವೇಳೆಯಲ್ಲೇ ಸುರಕ್ಷತಾ ಕ್ರಮಗಳು ಮಾಯ: ಮಕ್ಕಳು ನೋಡಿ ಕಲಿಯೋದಿಲ್ವಾ..!

1 min read
Spread the love

ತಾಲೂಕು ವಲಯದ ಕಾರ್ಯಕ್ರಮ ಉದ್ಘಾಟನೆ ವೇಳೆಯಲ್ಲಿ ಕೊನೆ ಪಕ್ಷ ಅಧಿಕಾರಿಗಳು ಶಿಕ್ಷಕರು ಕೂಡಾ ನಾವೂ ವಿದ್ಯಾರ್ಥಿಗಳ ಮುಂದೆ ಇದ್ದೇವೆ ಎನ್ನುವುದನ್ನ ಮರೆತು ಕೋವಿಡ್-19 ಸುರಕ್ಷತಾ ಕ್ರಮಗಳನ್ನ ಉಲ್ಲಂಘನೆ ಮಾಡಿದ್ರು. ಮಕ್ಕಳು ನಿಮ್ಮನ್ನ ನೋಡಿ ಕಲಿಯುತ್ತಾರೆ ಎಂಬುದು ತಮಗೆ ತಿಳಿದಿಲ್ವೇ ಸರ್..!

ಕಾರ್ಯಕ್ರಮದಲ್ಲಿ ನಡೆದಿದ್ದು ಇಲ್ಲಿದೆ ನೋಡಿ..

ಹುಬ್ಬಳ್ಳಿ: ಸರಕಾರಿ ಪ್ರೌಢಶಾಲೆ ಪೆಂಡಾರಗಲ್ಲಿ ಆವರಣದಲ್ಲಿ ಹುಬ್ಬಳ್ಳಿ ಶಹರ ವಲಯದ ತಾಲೂಕಾ ಹಂತದ ವಿದ್ಯಾಗಮ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಬಸವರಾಜ ಹೊರಟ್ಟಿ,  ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಿ ನಿರಾತಂಕವಾಗಿ ಶಾಲೆಗೆ ಹಾಜರಾಗಿ ಮಕ್ಕಳಿಗೆ ಶೈಕ್ಷಣಿಕ ಪ್ರಗತಿ ಸಾಧಿಸಲು ಮಾರ್ಗದರ್ಶನ ನೀಡಿದರು.

ಅಧ್ಯಕ್ಷ ಸ್ಥಾನ ವಹಿಸಿದ್ದ ಪ್ರಸಾದ ಅಬ್ಬಯ್ಯ ಅವರು ತಮ್ಮ ಕ್ಷೇತ್ರದ ಸರಕಾರಿ ಶಾಲೆಗಳಿಗೆ ಕೋವಿಡ್ ಸುರಕ್ಷತಾ ಕ್ರಮದ ಭಾಗವಾಗಿ ಕುಡಿಯುವ ಬಿಸಿ ನೀರಿನ ಸೌಲಭ್ಯವನ್ನು ಒದಗಿಸುವುದಾಗಿ ಭರವಸೆ ನೀಡಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ನೋಟ್ ಬುಕ್‍ಗಳನ್ನು ವಿತರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಕ್ಷೇತ್ರ ಸಮನ್ವಯ ಅಧಿಕಾರಿ ಎಮ್.ಎಸ್.ಶಿವಳ್ಳಿಮಠ ಅತಿಥಿಗಳಾಗಿ ಭಾಗವಹಿಸಿದ್ದರು.

ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ದೀಪಾ ಹಿರೇಗೌಡ್ರ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಣ ಸಂಯೋಜಕರು, ಸಿ.ಆರ್.ಪಿ., ಬಿಆರ್.ಪಿ., ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *