ಭಾರತವನ್ನ ಹೀಯಾಳಿಸಿದ್ದ ಟ್ರಂಪಗೆ ಸೋಲುಣಿಸಿದ ಜೋ ಬಿಡೆನ್ ಬಗ್ಗೆ ನಿಮಗೆಷ್ಟು ಗೊತ್ತು..!
1 min read
ಅಮೆರಿಕಾ: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೋ ಬಿಡೆನ್ ಅವರು ಅಮೆರಿಕಾದ 46ನೇ ಅಧ್ಯಕ್ಷರಾಗಲಿದ್ದಾರೆ. ಅಮೆರಿಕನ್ನರು ತಮ್ಮನ್ನು ತಮ್ಮ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ಗೌರವವಿದೆ ಎಂದು ಡೆಮೋಕ್ರಾಟಿಕ್ ಪಕ್ಷದ ಜೋ ಬಿಡೆನ್ ಹೇಳಿದ್ದಾರೆ.
ಬಿಡೆನ್ ಜೊತೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭಾರತ ಮೂಲದ ಕಮಲಾ ಹ್ಯಾರಿಸ್ ಚುನಾವಣೆ ಗೆಲ್ಲುವ ಮೂಲಕ ಅಮೇರಿಕಾದ ಉಪಾಧ್ಯಕ್ಷೆಯಾಗಿ ಭಾರತೀಯ ಅಮೆರಿಕನ್ ಮಹಿಳೆ ಹಾಗೂ ಮೊದಲ ಏಷ್ಯನ್ ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಕಮಲಾ ಹ್ಯಾರಿಸ್ ಪಾತ್ರರಾಗಿದ್ದಾರೆ.
ಯುಎಸ್ ಅಧ್ಯಕ್ಷ ಸ್ಥಾನಕ್ಕಾಗಿ ಬಿಗಿಯಾದ ಸ್ಪರ್ಧೆಯಲ್ಲಿ ಡೆಮೋಕ್ರಾಟ್ ಜೋ ಬಿಡೆನ್ ಅವರನ್ನು ಯುಎಸ್ ಮಾಧ್ಯಮ ಶನಿವಾರ ಘೋಷಿಸಿದ ಕೆಲವೇ ನಿಮಿಷಗಳ ನಂತರ, ಡೊನಾಲ್ಡ್ ಟ್ರಂಪ್ ಈ ತೀರ್ಮಾನವನ್ನು ತಿರಸ್ಕರಿಸಿದರು. ಅವರು ವಿಜೇತರು ಎಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕು ಎಂದು ಹೇಳಿದರು. ಇನ್ನು ಸರಳ ಸಂಗತಿಯೆಂದರೆ ಈ ಚುನಾವಣೆ ಮುಗಿದಿಲ್ಲ ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಮೇರಿಕ ಅಧ್ಯಕ್ಷರಾಗಲು 538 ಎಲೆಕ್ಟ್ರೋಲ್ ಕಾಲೇಜ್ ಮತಗಳ ಪೈಕಿ 270 ಮ್ಯಾಜಿಕ್ ಸಂಖ್ಯೆ ಆಗಿದ್ದು, ಜೊ ಬೈಡನ್ ಈಗಾಗಲೇ 290 ಮತಗಳನ್ನು ಪಡೆದುಕೊಂಡರೇ, ಡೊನಾಲ್ಡ್ ಟ್ರಂಪ್ 214 ಎಲೆಕ್ಟ್ರೋಲ್ ಕಾಲೇಜ್ ಮತಗಳನ್ನು ಗಳಿಸಿದ್ದು, ಟ್ರಂಪ್ ಗೆಲುವಿನ ಮಹತ್ವಾಕಾಂಕ್ಷೆ ನುಚ್ಚುನೂರಾಯಿತು.
ಅಮೆರಿಕದ ನಿಯೋಜಿತ ಅಧ್ಯಕ್ಷ “ಈತ ಯುದ್ಧ ಪ್ರಿಯ ಅಲ್ಲ, ಶಾಂತಿ ಪ್ರಿಯ” ಎಂದೇ ಪ್ರಸಿದ್ಧಿ ಪಡೆದ ಬಿಡನ್ ಬಗ್ಗೆ ಒಂದಿಷ್ಟು ಕಿರು ಮಾಹಿತಿ
ವಿಶ್ವದ ಮಹಾ ಶಕ್ತಿಶಾಲಿ ರಾಷ್ಟ್ರ ಅಮೆರಿಕದ ನೂತನ ಅಧ್ಯಕ್ಷರಾಗಲಿರುವ ಮಾಜಿ ಉಪಾಧ್ಯಕ್ಷ ಮತ್ತು ಡೆಮೊಕ್ರೆಟಿಕ್ ಪಕ್ಷದ ನಾಯಕ ಜೋ ಬಿಡೆನ್ ಸಾಗಿ ಬಂದ ಹಾದಿ ಅತ್ಯಂತ ರೋಚಕ. ಅಮೆರಿಕದ ಡೆಲವರ್ ನಗರಸಭೆಯಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಬಿಡೆನ್ ಸ್ವಶ್ರಮ ಮತ್ತು ಜನ ಬೆಂಬಲದೊಂದಿಗೆ ಹಂತ ಹಂತವಾಗಿ ಮೇಲೆರುತ್ತಾ ಶ್ವೇತಭವನದ ಅಧ್ಯಕ್ಷ ಕುರ್ಚಿಗೇರಲು ಸಜ್ಜಾಗಿದ್ದಾರೆ.
ಜೋಸೆಫ್ ರಾಬಿನೆಟ್ಟೆ ಬಿಡೆನ್ ನವೆಂಬರ್ 20, 1942ರಲ್ಲಿ ಪೆನ್ಸಿಲೆನ್ವಿಯಾದ ಪುಟ್ಟ ಪಟ್ಟಣದಲ್ಲಿ ಜನರಿಸಿದರು. ನಂತರ ಅವರ ಕುಟುಂಬ ಡೆಲವೇರ್ ಪ್ರಾಂತ್ಯಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ ಬಿಡೆನ್, ನಂತರ ಕಾನೂನು ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದರು. ಕಾಲೇಜು ದಿನಗಳಿಂದಲೂ ಸಂಘಟನೆ ಮತ್ತು ಹೋರಾಟದ ಗುಣಗಳಿಂದಾಗಿ ನಾಯಕರಾಗಿ ಗುರುತಿಸಿಕೊಂಡಿದ್ದ ಬಿಡೆನ್, 1970ರಲ್ಲಿ ಡೆಲವೇರ್ ನಗರಸಭೆಯಿಂದ ಕೌನ್ಸಿಲರಾಗಿ ಆಯ್ಕೆ ಯಾದರು.
ಉತ್ತಮ ರೀತಿಯಲ್ಲಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿ ಜನ ಮೆಚ್ಚುಗೆಗೆ ಪಾತ್ರರಾಗಿರುವ ಇವರು 1973ರಲ್ಲಿ ಡೆಲವೇರ್‍ನಿಂದ ಸೆನೆಟ್ ಚುನಾವಣೆಗೆ ಸ್ಪರ್ಧಿಸಿದರು. ಭಾರೀ ಮತಗಳಿಂದ ವಿಜೇತರಾದ ಇವರು ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸೆನೆಟರ್ ಆದ ಆರು ನಾಯಕರ ಪೈಕಿ ಬಿಡೆನ್ ಒಬ್ಬರರೆಂಬ ಮೆಚ್ಚುಗಾರಿಕೆಗೆ ಪಾತ್ರರಾದರು.
ಅಲ್ಲಿಂದ ಇವರ ರಾಜಕೀಯ ದಿಕ್ಕೆ ಬದಲಾಯ್ತು. 1973ರಿಂದ 2009ರವರೆಗೂ ಅವರು ಡೆಮೊಕ್ರೆಟಿಕ್ ಪಕ್ಷದಿಂದ ಅತ್ಯಂತ ಪ್ರಭಾವಿ ನಾಯಕರೆಂದು ಗುರುತಿಸಿಕೊಂಡು ಅಪಾರ ಜನಮನ್ನಣೆಗೆ ಪಾತ್ರರಾದರು. ಬರಾಕ್ ಒಬಾಮಾ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗ ಜನವರಿ 20,2009ರಿಂದ ಜನವರಿ 20, 2017ರವರೆಗೆ ಅಮೆರಿಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಬಿಡೆನ್ ಅವರು ಅಂತಾರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಸಮಿತಿ ಮತ್ತು ವಿದೇಶಾಂಗ ಸಂಬಂಧಗಳ ಸುಧಾರಣೆ ಸಮಿತಿ ಅಧ್ಯಕ್ಷರಾಗಿ ಅನೇಕ ಉತ್ತಮ ಕಾರ್ಯಗಳನ್ನು ಕೈಗೊಂಡರು. ಬಿಡೆನ್ ಉಪಾಧ್ಯಕ್ಷರಾಗಿದ್ದಾಗ ಭಾರತ ಸೇರಿದಂತೆ ವಿವಿಧ ದೇಶ ಗಳೊಂದಿಗಿನ ಸಂಬಂಧ ಸುಧಾರಣೆ ಹೊಸ ಮಜಲು ತಲುಪಿತು.
ಚಾಣಾಕ್ಷರು ಮತ್ತು ಶಾಂತ ಪ್ರಿಯರಾದ ಬಿಡೆನ್, ಇರಾಕ್ ಯುದ್ಧಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಯುಗೊ ಸ್ಲಾವಿಯಾ ಸಂಘರ್ಷ ಹಾಗೂ ವಿವಿಧ ದೇಶಗಳ ಅಂತರ್‍ಯುದ್ಧ ಬಗೆಹರಿಸಲು ಶ್ರಮಿಸಿದ್ದ ಇವರು, ಅಲ್ಲಿ ಹಿಂಸಾಚಾರ ನಿಯಂತ್ರಿ ಸಲು ನ್ಯಾಟೋ ಮತ್ತು ಶಾಂತಿಪಾಲನಾ ಪಡೆಗಳ ನಿಯೋಜನೆಗೆ ಕಾರಣರಾಗಿದ್ದರು.
ಯಾವುದೇ ದೇಶಗಳೊಂದಿಗೂ ವಿರೋಧ ಕಟ್ಟಿಕೊಳ್ಳಲು ಬಯಸದ ಬಿಡೆನ್ ರಾಜ ತಾಂತ್ರಿಕ ಮಾರ್ಗಗಳ ಮೂಲಕ ಕ್ಲಿಸ್ಟ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕುಶಾಗ್ರಮತಿ. ಇವರಿಗೆ ಮೊದಲಿನಿಂದಲೂ ಭಾರತದ ಬಗ್ಗೆ ವಿಶೇಷ ಒಲವು. ತಾವು ಅಧ್ಯಕ್ಷ ರಾದರೆ ಭಾರತದ ಸಂಬಂಧ ಹಿಂದೆಂದೂ ಕಾಣದ ರೀತಿಯಲ್ಲೂ ಮತ್ತಷ್ಟು ಸದೃಢಗೊಳ್ಳಲಿದೆ ಎಂದು ಬಿಡೆನ್ ಚುನಾವಣಾ ಪ್ರಚಾರಗಳಲ್ಲಿ ಘೋಷಿಸಿದ್ದರು.