ಇನ್ಸಪೆಕ್ಟರ್ ಮೀನಾಕ್ಷಿ ಎಚ್.ಎಂ ಅವರಿಗೆ ಮುಖ್ಯಮಂತ್ರಿ ಪದಕ
1 min read
ಬೆಂಗಳೂರು: ಅಶೋಕನಗರ ಸಂಚಾರಿ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ಮೀನಾಕ್ಷಿ ಹೆಚ್ ಎಂ ಅವರು ಮುಖ್ಯಮಂತ್ರಿ ಪದಕ್ಕಾಗಿ ಆಯ್ಕೆಗೊಂಡಿದ್ದಾರೆ. ಬೆಂಗಳೂರಿನಲ್ಲಿ ಮಹಿಳಾ ಠಾಣೆ ಹಾಗೂ ಹಲವಾರು ಪೋಲಿಸ್ ಠಾಣೆಗಳಲ್ಲಿ ಇನ್ಸಪೆಕ್ಟರ್ ಆಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವ ಮೀನಾಕ್ಷಿ ಅವರು ಮುಖ್ಯಮಂತ್ರಿ ಪದಕ್ಕಾಗಿ ಆಯ್ಕೆಗೊಂಡ ರಾಜ್ಯದ ಒಟ್ಟು 121 ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪೈಕಿ ಒಬ್ಬರಾಗಿದ್ದಾರೆ.
ಬೆಂಗಳೂರಿಗೆ ವರ್ಗವಾಗುವ ಮುನ್ನ ಹುಬ್ಬಳ್ಳಿ-ಧಾರವಾಡದಲ್ಲಿ ಸೇವೆ ನಿರ್ವಹಿಸಿರುವ ಮೀನಾಕ್ಷಿ ಅವರು ಧಾರವಾಡದ ಉಪನಗರ ಪೋಲಿಸ್ ಠಾಣೆ, ಮಹಿಳಾ ಪೋಲಿಸ್ ಠಾಣೆ, ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಗಳಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸಿದ್ದಾರೆ.
ಮೀನಾಕ್ಷಿಯವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನವರಾಗಿದ್ದಾರೆ. ಧಾರವಾಡದಲ್ಲಿ ಪದವಿ ಶಿಕ್ಷಣ ಮುಗಿಸಿದ ನಂತರ ಪೋಲಿಸ್ ಇಲಾಖೆಗೆ ನೇಮಕಗೊಂಡಿದ್ದರು.