ಇವರು ಶಿಕ್ಷಕರ ರಾಜ್ಯಾಧ್ಯಕ್ಷರು- ಇವರೇನು ಬೆರೆತಿದ್ದಾರೆ ನೀವೇ ನೋಡಿ..
1 min read
ಕೊಪ್ಪಳ: ಇದು ಬರ ಬರುತ್ತ ರಾಯರ ಕುದುರೆ.. .. ಎನ್ನುವ ಮಾತನ್ನ ಹೇಳುವಂತಿದೆ. ಏಕಂದ್ರೇ, ಯಾವ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಕೊಡಬೇಕೋ ಅಲ್ಲಿ ರಾಜಕಾರಣಿಯ ಪೋಸುಗಳು ಆರಂಭವಾಗಿವೆ. ಅದನ್ನೂ ಪ್ರಚಾರಕ್ಕೆ ಬಳಸಿಕೊಳ್ಳುವುದು ರೂಢಿಯಾಗುತ್ತಿದೆ. ಎಲ್ಲಕ್ಕಿಂತ ಮೊದಲು ತಾವೊಬ್ಬ ಶಿಕ್ಷಕ ಮತ್ತೂ ಮಕ್ಕಳಿಗೆ ಪಾಠ ಹೇಳುವ ಸರಕಾರಿ ನೌಕರ ಎಂಬುದನ್ನ ಮರೆತಂತೆ ಕೆಲವರು ನಡೆದುಕೊಳ್ಳುತ್ತಿದ್ದಾರೆಂಬ ಹೇಳಲಾಗುತ್ತಿದೆ.
ಈ ಭಾವಚಿತ್ರವನ್ನ ನೀವೊಮ್ಮೆ ನೋಡಿ ಬಿಡಿ. ಇವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗಗೌಡ ಪಾಟೀಲ, ಇವರು ತಾವು ಕಲಿಸುವ ಕೊಪ್ಪಳ ಸರದಾರಗಲ್ಲಿಯಲ್ಲಿರುವ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾಗಮ ವೀಕ್ಷಿಸಿ ಬೆರೆತರಂತೆ. ಈ ಭಾವಚಿತ್ರದಲ್ಲಿ ಶಿಕ್ಷಕ ಮತ್ತು ಶಿಷ್ಯರ ಸಂಬಂಧಗಳು ನಿಮಗೆ ಕಾಣುತ್ತವೇಯಾ..
ಯಾರೋ ಒಬ್ಬ ರಾಜಕಾರಣಿ ಮೊದಲ ಬಾರಿಗೆ ಶಾಲೆಗೆ ಬಂದು ಮಕ್ಕಳನ್ನ ದೂರದಿಂದ ನಿಂತು ಮಾತನಾಡಿಸಿ, ಸಿಬ್ಬಂದಿಗಳಿಗೆ ಸೂಚನೆ ನೀಡಿ ಹೋಗುವಂತೆ ಕಾಣುತ್ತಿಲ್ಲವೇ. ಇದು ಬೇಕಿತ್ತಾ..
ಶಿಕ್ಷಕರು ರಾಜಕಾರಣಿಗಳು ಆಗುವುದಾದರೇ ತಪ್ಪೇ ಇಲ್ಲ. ಆದರೆ, ಶಿಕ್ಷಕರಾಗಿ ರಾಜಕಾರಣಕ್ಕೆ ನಿಲ್ಲುವುದು ಎಷ್ಟು ಸರಿ ಎನ್ನುವುದನ್ನ ರಾಜ್ಯಾಧ್ಯಕ್ಷರು ಅರಿತುಕೊಳ್ಳಬೇಕಿದೆ. ತಾವೂ ಕಲಿಸುವ, ತಮಗೆ ಸಂಬಳ ನೀಡುವ ಶಾಲೆಯಲ್ಲಿ ತಾವೂ ‘ಬೆರೆಯುವ’ ಅವಶ್ಯಕತೆಯಿದೆ. ಯಾಕಂದ್ರೇ, ಅದೇ ಕಾರಣಕ್ಕೆ ಸರಕಾರ ನಿಮಗೆ ಶಿಕ್ಷಕ ಎಂದು ಕರೆದು, ವೇತನ ಕೊಡುತ್ತಿರುವುದು.. ಅಲ್ವೇ ಸರ್..