ರಾಜ್ಯ ಶಿಕ್ಷಕರ ಸಂಘಕ್ಕೆ ಯಾರಾಗ್ತಾರೆ ರಾಯಭಾರಿ..!
1 min read
ಹುಬ್ಬಳ್ಳಿ: ಶಿಕ್ಷಕರ ಸಂಘಕ್ಕಾಗಿ ಚುನಾವಣೆ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಶಿಕ್ಷಕರ ರಾಜ್ಯ ಘಟಕಕ್ಕೆ ಯಾರು ಆಗ್ತಾರೆ ರಾಯಭಾರಿ ಎಂಬ ಪ್ರಶ್ನೆ ಮೂಡಿದ್ದು, ಷಡಕ್ಷರಿ ಮತ್ತು ನಾರಾಯಣಸ್ವಾಮಿ ತಂಡದ ನಡುವೆ ತೀವ್ರ ಕಾಳಗ ಏರ್ಪಡುವ ಲಕ್ಷಣಗಳು ಕಂಡು ಬರುತ್ತಿವೆ.
ರಾಜ್ಯ ಸರಕಾರಿ ನೌಕರರ ರಾಜ್ಯಾಧ್ಯಕ್ಷ ಷಡಕ್ಷರಿ ಹಾಗೂ ಬಸವರಾಜ ಗುರಿಕಾರ ಸಫೊರ್ಟ್ ಮಾಡುವ ನಾರಾಯಣಸ್ವಾಮಿ ಬಣದ ನಡುವೆ ಹಲವು ರೀತಿಯಲ್ಲಿ ಚುನಾವಣಾ ಕಾಳಗ ಆರಂಭಗೊಂಡಿದೆ. ಎರಡು ಗುಂಪುಗಳ ನಡುವಿನ ಚುನಾವಣಾ ಸಮರ ದಿನೇ ದಿನೇ ಬೇರೆ ಸ್ವರೂಪ ಪಡೆಯುತ್ತಿದ್ದು, ರಾಜ್ಯದ ಚುಕ್ಕಾಣಿಯನ್ನ ಯಾರೂ ಹಿಡಿಯುತ್ತಾರೆಂಬ ಕೌತುಕ ಮೂಡಿದೆ.
ಶಿಕ್ಷಕರ ಸಮಸ್ಯೆಗಳನ್ನ ಈಡೇರಿಸುವಲ್ಲಿ ರಾಜ್ಯಮಟ್ಟದ ಚುನಾಯಿತ ಸಂಘಗಳು ವಿಫಲವಾದ ಬೆನ್ನಲ್ಲೆ ಹಲವು ಶಿಕ್ಷಕರ ಸಂಘಟನೆಗಳು ಆರಂಭಗೊಂಡವು. ಅವುಗಳಲ್ಲಿ ಪ್ರಮುಖವಾಗಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಸಾವಿತ್ರಿಭಾಯಿ ಶಿಕ್ಷಕಿಯರ ಸಂಘ, ಪದವೀಧರ ಸಂಘ ಸೇರಿದಂತೆ ಹಲವು ಸಂಘಟನೆಗಳು ಆರಂಭಗೊಂಡವು.
ಇದೀಗ ಚುನಾವಣೆ ಸಮಯದಲ್ಲಿ ಮತ್ತದೇ ಭರವಸೆಯೊಂದಿಗೆ ರಾಜ್ಯದ ಶಿಕ್ಷಕರ ಚುಕ್ಕಾಣಿ ಹಿಡಿಯಲು ಕಸರತ್ತು ಆರಂಭಗೊಂಡಿದೆ. ಹಾಲಿಯಾಗಿರುವ ಸಂಘಗಳು ಕೂಡಾ, ಆಯಾ ಜಿಲ್ಲಾವಾರು ನಿರ್ಧಾರಗಳನ್ನ ತೆಗೆದುಕೊಳ್ಳಲು ಮುಂದಾಗುವಂತೆ ಸೂಚನೆ ನೀಡಿದ್ದಾರೆ.
ಈ ನಡುವೆ ಷಡಕ್ಷರಿಯವರ ಗುಂಪು, ಶಿಕ್ಷಕರ ಸಂಘದ ಚುಕ್ಕಾಣಿ ಹಿಡಿಯಲು ಹರಸಾಹಸ ಮಾಡುತ್ತಿದ್ದಾರೆ. ಮೊದಲಿನ ಬಸವರಾಜ ಗುರಿಕಾರ ಬೆಂಬಲಿತ ನಾರಾಯಣಸ್ವಾಮಿ ಬಣ ಇರುವುದನ್ನ ಉಳಿಸಿಕೊಳ್ಳಲು ಪ್ರಯತ್ನ ಮುಂದುವರೆಸಿದ್ದಾರೆ.
ಯಾವುದೇ ರಾಜಕಾರಣಿಗಳಿಗೂ ಕಡಿಮೆಯಾಗದಂತೆ ತಂತ್ರಗಳು ಇಲ್ಲಿಯೂ ನಡೆಯುತ್ತಿದ್ದು, ಕೊನೆಯಲ್ಲಿ ಯಾರೂ ವಿಜಯಿಗಳಾಗುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.