ನಿಗದಿಯಾಯಿತು ಶಿಕ್ಷಕರ ಸಂಘದ ಚುನಾವಣೆ: ಡಿಸೆಂಬರ 6ಕ್ಕೆ ನಿಗದಿ
1 min read
ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ದಿನಾಂಕವನ್ನ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ನಿವೃತ್ತ ಉಪನಿರ್ದೇಶಕರು ಹಾಗೂ ರಾಜ್ಯ ಚುನಾವಣಾಧಿಕಾರಿ ಸಿ.ಬಿ.ಜಯರಂಗ ಮಾಹಿತಿಯನ್ನ ನೀಡಿದ್ದಾರೆ.
ಶಿಕ್ಷಕ ಸಂಘದ ಚುನಾವಣೆಯ ನೋಟಿಫಿಕೇಷನ್ 26 ರಂದು ಹೊರಡಲಿದ್ದು, ಡಿಸೆಂಬರ್ 6ಕ್ಕೆ ಚುನಾವಣೆ ನಡೆಯಲಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2020-25 ರ ಚುನಾವಣಾ ವೇಳಾಪಟ್ಟಿ ಇದಾಗಿದೆ.
ಕಳೆದ ಹಲವು ತಿಂಗಳುಗಳು ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಈ ಬಗ್ಗೆ ಶಿಕ್ಷಕರ ಸಂಘಗಳು ಕೂಡಾ ಒತ್ತಾಯವನ್ನ ಮಾಡಿದ್ರು. ಅಷ್ಟೇ ಅಲ್ಲ, ಮೊದಲಿನ ಚುನಾಯಿತ ಸದಸ್ಯರ ಬಗ್ಗೆಯೂ ದೂರುಗಳು ಕೇಳಿ ಬಂದಿದ್ದವು.
ಕೊರೋನಾ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ಸಂಘದ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದ್ದು, ಮೊದಲಿನ ತಂಡಗಳು ಮತ್ತೆ ಕಣಕ್ಕೆ ಇಳಿದು ತಮ್ಮ ಪ್ರಾಬಲ್ಯವನ್ನ ಮೆರೆಯುತ್ತಾವಾ ಅಥವಾ ಇತ್ತೀಚಿನ ಉತ್ತಮ ಜನರು ಚುನಾವಣೆಯಲ್ಲಿ ಗೆಲ್ಲುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.