ಮಲ್ಲಿಕಾರ್ಜುನ ಉಪ್ಪಿನ-ಆಶಾ ಮುನವಳ್ಳಿ ಸೇರಿದಂತೆ ಹಲವರಿಗೆ ಶಿಕ್ಷಕರತ್ನ ಪ್ರಶಸ್ತಿ: ಬದಾಮಿಯಲ್ಲಿ ನ.22ರಂದು ಪ್ರಧಾನ
1 min read
ಧಾರವಾಡ: ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುವ ಶಿಕ್ಷಕರಿಗೆ ಶಿಕ್ಷಕ ರತ್ನ ಹಾಗೂ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಬೇರೆ ವರ್ಗದ ಜನರಿಗೆ ಶ್ರಮಿಕರತ್ನ ಪ್ರಶಸ್ತಿ ವಿತರಣೆ ದಿನಾಂಕ ನಿಗದಿಯಾಗಿದ್ದು, ಇದೇ ತಿಂಗಳ 22ರಂದು ಬಾಗಲಕೋಟೆ ಜಿಲ್ಲೆ ಬದಾಮಿ ಪಟ್ಟಣದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.
ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತಿ ಪಡೆದಿರುವ ಲೂಸಿ.ಕೆ.ಸಾಲ್ಡಾನ ಅವರು ಕಳೆದ ಹತ್ತು ವರ್ಷಗಳಿಂದ ಪ್ರಶಸ್ತಿಗಳು ನೀಡಲಾಗುತ್ತಿದ್ದು, ಈ ಬಾರಿ ಪ್ರಮುಖವಾಗಿ ಮಲ್ಲಿಕಾರ್ಜುನ ಉಪ್ಪಿನ, ಎಂ.ವ್ಹಿ.ಕುಸುಮಾ, ಟಿ.ಕೆ.ನಾಗೇಶ, ಡಾ.ಆಶಾ ಮುನವಳ್ಳಿ, ಸಿ.ವೈ.ತಿಗಡಿ ಸೇರಿದಂತೆ ಹಲವರಿಗೆ ಪ್ರಶಸ್ತಿ ಪ್ರಧಾನವಾಗಲಿದೆ.
ಕರ್ನಾಟಕ ಸರಕಾರಿ ಗ್ರಾಮಿಣ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಬದಾಮಿಯಲ್ಲಿ ನಡೆಯುತ್ತಿದ್ದು, ಅದೇ ಸ್ಥಳದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಿಕ್ಷಕರ ಕ್ಷೇತ್ರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತ ಬಂದವರನ್ನ ಗುರುತಿಸಿ, ಶಿಕ್ಷಕರತ್ನ ಪ್ರಶಸ್ತಿಯನ್ನ ನೀಡಲಾಗುತ್ತಿದೆ.
ಲೂಸಿ.ಕೆ.ಸಾಲ್ಡಾನ್ ಶಿಕ್ಷಕ ಹಾಗೂ ಅಕ್ಷರವನ್ನ ಪ್ರೀತಿಸುತ್ತ ಗೌರವಿಸುತ್ತ ಬಂದಿದ್ದು, ಅದನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಹೆಸರು
# ಮಲ್ಲಿಕಾರ್ಜುನ ಉಪ್ಪಿನ
# ಎಂ.ವಿ.ಕುಸುಮಾ
# ಟಿ.ಕೆ.ನಾಗೇಶ
# ಲಕ್ಷ್ಮೀ ದೇವಮ್ಮಾ
# ಪಿ.ಎಸ್.ಅಂಕಲಿ
# ಫಣಿಂದ್ರನಾಥ
# ಎಂ.ಬಿ.ಕಮ್ಮಾರ
# ಸಿ.ವೈ.ತಿಗಡಿ
# ಎನ್.ಜಿ.ಕವಳಿ
# ಎ.ಎಂ.ಸೌಭಾಗ್ಯ
# ಡಾ.ಆಶಾ ಮುನವಳ್ಳಿ
# ರೂಪಶ್ರೀ ಎಚ್.ಆರ್.
# ರಜೀಯಾಬೇಗಂ
# ಎ.ಸಿ.ಉಮಚಗಿ
# ನಾಗರಾಜ ಆತಡಕರ
# ಮಲ್ಲೇಶ ಕಟ್ಟಿಮನಿ
# ಸಿದ್ಧಲಿಂಗೇಶ ಎಂ.ವಿ
# ಹನಮಂತ ಗುಡೂರ
# ಮಹನ್ಯ ಪಾಟೀಲ
# ಡಾ.ಲಕ್ಷ್ಮಣ ಕೆ.ಎಂ
# ಮಲ್ಲಿಕಾರ್ಜುನ ಶಿರೂರ
# ವಿಠೋಬಾ ಭಜಂತ್ರಿ
# ಶುಕುರಮಿಯಾ ಮೆಹಬೂಬಸಾಬ