ಗ್ರಾ.ಪಂ ಚುನಾವಣೆ: ಕರ್ತವ್ಯದಲ್ಲಿದ್ದಾಗ ಕುಸಿದು ಬಿದ್ದಿದ್ದ ಶಿಕ್ಷಕ ಸಾವು
1 min read
ದಾವಣಗೆರೆ: ಗ್ರಾಮ ಪಂಚಾಯತಿ ಚುನಾವಣೆ ಕರ್ತವ್ಯಕ್ಕೆ ಹೋದ ಸಮಯದಲ್ಲಿ ಕುಸಿದು ಬಿದ್ದು ತೀವ್ರವಾದ ಅನಾರೋಗ್ಯಕ್ಕೆ ಒಳಗಾಗಿದ್ದ ಶಿಕ್ಷಕ, ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ಪಟ್ಟಣದಲ್ಲಿಂದು ನಡೆದಿದೆ.
ದಾವಣಗೆರೆ ಜಿಲ್ಲೆಯ ಕೊಟ್ಟೂರು ಚಿರಬಿ ಪ್ರೌಢಶಾಲೆ ಶಿಕ್ಷಕ ಪ್ರಕಾಶ ಸಕ್ರಿ ಎಂಬಾತರೇ ಸಾವಿಗೀಡಾಗಿದ್ದಾರೆ. ಬೇವೂರು ಗ್ರಾಮ ಪಂಚಾಯತಿ ಚುನಾವಣೆಗೆಂದು ನೇಮಕ ಮಾಡಲಾಗಿತ್ತು. ಅದರಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಶೌಚಾಲಯಕ್ಕೆ ತೆರಳಿದಾಗ ಕುಸಿದು ಬಿದ್ದಿದ್ದರಿಂದ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಇಂದು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಮೂಲತಃ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದ ಶಿಕ್ಷಕ ಪ್ರಕಾಶ ಸಕ್ರಿ ಹಲವು ವರ್ಷಗಳಿಂದ ದಾವಣಗೆರೆ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಗ್ರಾಮ ಪಂಚಾಯತಿ ಚುನಾವಣೆಯ ಸಮಯದಲ್ಲಿ ಇನ್ನುಳಿದ ಸಿಬ್ಬಂದಿಗಳೊಂದಿಗೆ ಲವಲವಿಕೆಯಿಂದ ಕೆಲಸ ಮಾಡುತ್ತಲೇ ಹೋಗಿ ಬಿದ್ದು, ಹೀಗೆ ಸಾವಿಗೀಡಾಗಿರುವುದು ಶಿಕ್ಷಕ ವಲಯದಲ್ಲಿ ಕಣ್ಣೀರು ಮೂಡಿಸಿದೆ. ಶಿಕ್ಷಕ ಪ್ರಕಾಶ ಅವರ ಸಾವಿಗೆ, ದಾವಣಗೆರೆ ಶಿಕ್ಷಕ ಸಮೂಹ ಸಂತಾಪ ಸೂಚಿಸಿದೆ.