ಶಿಕ್ಷಕರ ಚುನಾವಣೆ ಮೋಸ ಧಮಕಿ ಆರಂಭ: +918867547385 ಯಾರೂ ನೀ- ಧಮಕಿಗೆ ಹೆದರಲ್ಲ: ಡಾ.ಲತಾ ಮುಳ್ಳೂರ
1 min read
ಧಾರವಾಡ: 2020-25ರವರೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಘೋಷಣೆಯಾಗಿದೆ. ಹಾಲಿ ಇರುವ ಪಧಾಧಿಕಾರಿಗಳು ಸಂಘದ ಹಿಡಿತವನ್ನು ತಮ್ಮಲ್ಲಿಯೇ ಕುತಂತ್ರದ ಮೂಲಕ ಉಳಿಸಿಕೊಳ್ಳಲು ಶತಾಯಗತಾಯ ಮೋಸ ಮಾಡುತ್ತಿದ್ದು, ಚುನಾವಣೆಗೂ ಮುನ್ನ ಸದಸ್ಯತ್ವ ಪಡೆದವರ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಆದರೆ, ಸಂಘಟನೆ ಮತದಾರರ ನಾಮಪತ್ರ ಕೊಡುವ ದಿನ ಮತದಾರರ ಪಟ್ಟಿ ಬಿಡುಗಡೆ ಮಾಡಿದೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಭಾಯಿ ಶಿಕ್ಷಕಿಯರ ಸಂಘ (ರಿ)ರಾಜ್ಯ ಘಟಕ ಧಾರವಾಡ ರಾಜ್ಯಾಧ್ಯಕ್ಷೆ ಲತಾ ಎಸ್ ಮುಳ್ಳೂರ ಹೇಳಿದ್ದಾರೆ.
ಸಂಘಟನೆಯ ವಂಚನೆ ಎಷ್ಟರಮಟ್ಟಿಗೆ ಸಾಗಿದೆ ಎಂದರೆ ಸದಸ್ಯತ್ವ ಪಡೆದವರು ಮತವನ್ನು ಹಾಕಲು ಅರ್ಹರಾಗಿರುತ್ತಾರೆ ಹಾಗೂ ಸದಸ್ಯತ್ವ ಇರುವವರು ಪ್ರಸ್ತುತ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಸಾಧ್ಯ. ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಸುಗಮವಾಗಿ ಎರಡು ವರ್ಷಗಳು ಕಳೆದರೂ ನಮ್ಮ ಸಂಘದ ಪದಾಧಿಕಾರಿಗಳ ಸದಸ್ಯತ್ವವನ್ನು ಈ ಚುನಾವಣೆಯ ಸಮಯದಲ್ಲಿ ರದ್ದು ಮಾಡಿರುವ ಮಸಲತ್ತು ಆದರೂ ತಿಳಿಯದೇ ಹೋಯಿತು ಹಾಗೂ ಕಟಾವ್ ಆಗುತ್ತಿರುವ ಹಣವನ್ನು ಪ್ರಜಾಪ್ರಭುತ್ವ ಉಳಿಸಲು ಶಿಕ್ಷಣ ಸಚಿವರು ಮುಂದಾಗಬೇಕೆಂದು ವಿನಂತಿಸಿರುವರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಹೊರಗಡೆ ಬಂದು ಹಲವಾರು ಸಂಘಟನೆಗಳು ಇಂದು ಹುಟ್ಟಿಕೊಂಡಿವೆ. ಆದರೆ, ಬೇರೆ ಸಂಘಟನೆ ಪದಾಧಿಕಾರಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ಬಿಟ್ಟಿಲ್ಲ. ಆದರೆ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷ ನನ್ನ ಹೆಸರನ್ನು ಹಾಗೂ ಅನೇಕ ಮಹಿಳಾ ಶಿಕ್ಷಕಿಯರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದಾರೆ. ಸಂಘಟನೆಯಾಗಿ ಎರಡು ವರ್ಷಗಳು ಕಳೆದಿವೆ. ಆಗಲೇ ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕಿತ್ತು. ಈಗ ತೆಗೆಯುವ ಅವಶ್ಯಕತೆ ಏನಿತ್ತು. ಶಿಕ್ಷಕಿಯರ ಸಂಘಟನೆಯ ಬಗ್ಗೆ ಅಷ್ಟೊಂದು ಭಯವೇ. ಅನ್ಯಾಯದ ಪರಮಾವಧಿ ಇದು ಎಂದು ಡಾ. ಲತಾ. ಎಸ್. ಮುಳ್ಳೂರ ಹೇಳಿದ್ದಾರೆ.