ತಡಕೋಡದಲ್ಲಿ “ವಾಟರಮನ್” ಮೇಲಿನ ಕೋಪ: ಪಿಡಿಓ ಮೇಲೆ ಕೆಲವರ ತಾಪ…!?
1 min read
ಧಾರವಾಡ: ತಾಲೂಕಿನ ತಡಕೋಡ ಗ್ರಾಮ ಪಂಚಾಯತಿಯಲ್ಲಿ ವಾಟರ್ ಮನ್ ನ್ನ ತೆಗೆಯುವಂತೆ ಹಠ ಹಿಡಿದಿರೋ ಮೂವರು ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಹಲವರನ್ನ ಕೂಡಿಸಿಕೊಂಡು ತಡಕೋಡ ಗ್ರಾಮ ಪಂಚಾಯತಿ ಮುಂದೆ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಗ್ರಾಮದಲ್ಲಿ ವಾಟರಮನ್ ಆಗಿ ಕಾರ್ಯನಿರ್ವಹಿಸುತ್ತಿರುವ ಎಂಬುವವರು ಅತಿರೇಕದಿಂದ ವರ್ತನೆ ಮಾಡುತ್ತಾರೆಂಬ ಕಾರಣಕ್ಕೆ ಆತನನ್ನ ಬದಲಾವಣೆ ಮಾಡಬೇಕೆಂದು ಕೆಲವು ಸದಸ್ಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಕಾನೂನಿನ ಪ್ರಕಾರ ಆತನಿಗೆ ನೋಟಿಸ್ ನೀಡಿ, ಆತನಿಂದ ಉತ್ತರ ಪಡೆದು ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಪಿಡಿಓ ಹೇಳಿದ್ದಾರೆ.
18 ಗ್ರಾಮ ಪಂಚಾಯತಿ ಸದಸ್ಯರಿದ್ದರೂ ಕೇವಲ ಮೂವರು ಸದಸ್ಯರು ಹಾಗೂ ಮಾಜಿ ಗ್ರಾಮ ಪಂಚಾಯತಿ ನೌಕರನೊಬ್ಬ ಹೋರಾಟ ಆರಂಭಿಸಿ, ಪಿಡಿಓ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆಂದು ಹೇಳಲಾಗಿದೆ.