ವರ್ಗಾವಣೆಯಲ್ಲಿ CRP,BRP,ECO ಗಳಿಗೆ ಮೊದಲ ಆಧ್ಯತೆ ಕೊಡಿ: ಎಂಎಲ್ಸಿ ಎಸ್.ವಿ.ಸಂಕನೂರ
1 min read
ಧಾರವಾಡ: ಪ್ರಸಕ್ತ ಸಾಲಿನ ವರ್ಗಾವಣೆಯಲ್ಲಿ 5 ವರ್ಷ ಪೂರ್ಣಗೊಳಿಸಿದ ಸಿಆರ್ ಪಿ, ಬಿಆರ್ ಪಿ ಹಾಗೂ ಇಸಿಓಗಳಿಗೆ ಮೊದಲ ಆಧ್ಯತೆಯಲ್ಲಿ ಕೌನ್ಸಿಲಿಂಗ್ ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೂತನ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮನವಿ ಮಾಡಿಕೊಂಡಿದ್ದಾರೆ.
ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ಅಧಿನಿಯಮದ ಪ್ರಕಾರ ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆಯನ್ನ ಕೈಬಿಟ್ಟಿರುವುದರಿಂದ ಹುದ್ದೆಗಳ CRP,BRP,ECO ಶಿಕ್ಷಕರಿಗೆ ಕೌನ್ಸಲಿಂಗ್ ನಡೆಸಬೇಕೆಂದಿರುವುದನ್ನ ಸಂಕನೂರ ಪ್ರಶ್ನಿಸಿದ್ದಾರೆ.
ಆದರೆ, ಈ ಸಾಲಿನಲ್ಲಿ ತಾವು ನಡೆಸುತ್ತಿರುವ ವರ್ಗಾವಣಾ ಪ್ರಕ್ರಿಯೆಯಲ್ಲಿ ಕಳೆದ ಸಾಲಿನಲ್ಲಿ ಹೆಚ್ಚುವರಿ/ಕಡ್ಡಾಯ ವರ್ಗಾವಣೆಯಲ್ಲಿ ಸ್ಥಳನಿಯುಕ್ತಿಗೊಂಡ ಶಿಕ್ಷಕರುಗಳಿಗೆ ಮೊದಲು ಕೌನ್ಸಿಲಿಂಗ್ ನಿಗದಿಪಡಿಸಿರುವುದರಿಂದ ನಿರ್ದಿಷ್ಟ ಹುದ್ದೆಗಳಾದ CRP,BRP,ECO ಗಳಿಗೆ ಅವರ ತಾಲೂಕಿನಲ್ಲಿಯ ಖಾಲಿ ಹುದ್ದೆಗಳು ಸಿಗದೇ ಅವರು ತಾಲೂಕಿನಿಂದ ಹೊರ ಹೋಗಬೇಕಾಗುವುದರಿಂದ ಅವರಿಗೆ ಅನ್ಯಾಯವಾಗುತ್ತದೆ ಎಂದು ಸಂಕನೂರ ವಿವರಿಸಿದ್ದಾರೆ.
ಹಾಗಾಗಿ, ಮೊದಲು ಐದು ವರ್ಷ ಪೂರ್ಣಗೊಳಿಸಿದ CRP,BRP,ECO ಗಳಿಗೆ ಕೌನ್ಸಿಲಿಂಗ್ ನಡೆಸುವಂತೆ ಸೂಚನೆ ನೀಡುತ್ತೇನೆಂದು ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದ್ದಾರೆ.